ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ನಾಗರಿಕ ಸಂಹಿತೆ ಒಪ್ಪಿಕೊಳ್ಳುವುದಿಲ್ಲ: ಜಾಮಿಯತ್ ಉಲೆಮಾ–ಇ–ಹಿಂದ್‌

Published 6 ಜುಲೈ 2023, 14:36 IST
Last Updated 6 ಜುಲೈ 2023, 14:36 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಏಕರೂಪ ನಾಗರಿಕ ಸಂಹಿತೆಯು (ಯುಸಿಸಿ) ಸಂವಿಧಾನ ಖಾತರಿಪಡಿಸಿರುವ ‘ಧಾರ್ಮಿಕ ಸ್ವಾತಂತ್ರ’ಕ್ಕೆ ವಿರುದ್ಧವಾಗಿರುವ ಕಾರಣ ಅದನ್ನು ವಿರೋಧಿಸುವುದಾಗಿ ಪ್ರಮುಖ ಮುಸ್ಲಿಂ ಧಾರ್ಮಿಕ ಸಂಘಟನೆ ‘ಜಾಮಿಯತ್ ಉಲೆಮಾ–ಇ–ಹಿಂದ್‌’ ತಿಳಿಸಿದೆ.

ಈ ವಿಚಾರವಾಗಿ ಎಲ್ಲಾ ಧರ್ಮಗಳ ಮತ್ತು ಬುಡಕಟ್ಟು ಜನಾಂಗಗಳ ಮುಖಂಡರನ್ನು ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಕಾನೂನು ಆಯೋಗಕ್ಕೆ ಬುಧವಾರ ಬರೆದ ಪತ್ರದಲ್ಲಿ ತಿಳಿಸಿದೆ.

ಜಮೈತ್‌ ಅಧ್ಯಕ್ಷ ಮೌಲಾನ ಅರ್ಶದ್‌ ಮದನಿ ಅವರು ಈ ಕುರಿತು ಬರೆದಿರುವ ಪತ್ರದಲ್ಲಿ, ‘ಯುಸಿಸಿ ಜಾರಿಯು ಕೇವಲ ಮುಸ್ಲಿಮರಿಗೆ ಸಂಬಂಧಿಸಿದ ಸಮಸ್ಯೆ ಅಲ್ಲ, ಬದಲಾಗಿ ಎಲ್ಲಾ ಭಾರತೀಯರ ಸಮಸ್ಯೆಯಾಗಿದೆ’ ಎಂದು ಹೇಳಿದ್ದಾರೆ. 

‘ಈ ದೇಶದಲ್ಲಿ ನಾವು ಮೊದಲಿನಿಂದಲೂ ನಮ್ಮ ಧಾರ್ಮಿಕ ಆಚರಣೆಗಳನ್ನು ಸ್ವತಂತ್ರವಾಗಿ ಆಚರಿಸುತ್ತಿದ್ದೇವೆ. ನಮ್ಮ ಧಾರ್ಮಿಕ ವ್ಯವಹಾರಗಳಲ್ಲಿ ಮತ್ತು ಆರಾಧನೆಯ ವಿಧಾನಗಳಲ್ಲಿ ಯಾವುದೇ ಬದಲಾವಣೆಯನ್ನು ನಾವು ಮಾಡಿಕೊಳ್ಳುವುದಿಲ್ಲ. ಕಾನೂನು ಪರಿಮಿತಿಯೊಳಗೆ ನಮ್ಮ ಧಾರ್ಮಿಕ ಹಕ್ಕುಗಳನ್ನು ಕಾಪಾಡಿಕೊಳ್ಳಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಅನುಸರಿಸುತ್ತೇವೆ’ ಎಂದು  ಹೇಳಿದ್ದಾರೆ. 

‘ಆಡಳಿತವು ಜನರ ಮೇಲೆ ಯಾವುದೇ ನಿರ್ಧಾರವನ್ನು ಹೇರಬಾರದು. ನಿರ್ಧಾರ ತೆಗೆದುಕೊಳ್ಳುವ ಮೊದಲು ಒಮ್ಮತದ ಅಭಿಪ್ರಾಯ ಮೂಡಿಸಲು ಯತ್ನಿಸಬೇಕು ಎಂಬುದನ್ನು ಜಮೈತ್ ಇಚ್ಛಿಸುತ್ತದೆ’ ಎಂದು ಹೇಳಿದ್ದಾರೆ.

ಕೇಂದ್ರವು ಯುಸಿಸಿ ಪ್ರಸ್ತಾವನೆ ಮಾಡಿದಾಗಿನಿಂದಲೂ ಅದು ವಿವಾದಾತ್ಮಕ ವಿಷಯವಾಗಿದೆ ಎಂದು ಹೇಳಿದ ಜಮೈತ್‌, ಇದು ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT