ನವದೆಹಲಿ: ವಿಪಕ್ಷಗಳ ಆಡಳಿತವಿರುವ ಹಲವು ರಾಜ್ಯಗಳಿಗೆ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ನಲ್ಲಿ ತಾರತಮ್ಯ ಮಾಡಲಾಗಿದೆ ಎಂದು ದೂರಿ, ‘ಇಂಡಿಯಾ’ ಒಕ್ಕೂಟದ ಸಂಸದರು ಸಂಸತ್ನ ಒಳಗೆ ಹಾಗೂ ಹೊರಗೆ ಬುಧವಾರ ಭಾರಿ ಪ್ರತಿಭಟನೆ ನಡೆಸಿದರು.

ಇದೇ ವಿಚಾರವನ್ನು ಮುಂದಿಟ್ಟಕೊಂಡು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗಳಿಗೆ ಅಡ್ಡಿಪಡಿಸಿದ ‘ಇಂಡಿಯಾ’ ಸಂಸದರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘ಎನ್ಡಿಎ ಮೈತ್ರಿಕೂಟ ನೇತೃತ್ವದ ಸರ್ಕಾರವು ದೇಶದ ಆರ್ಥಿಕತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಮತ್ತು ಹಣಕಾಸು ವಿಷಯದಲ್ಲಿ ಜಾಗರೂಕವಾಗಿಲ್ಲ’ ಎಂದು ವಿಪಕ್ಷಗಳ ಸಂಸದರು ಕೇಂದ್ರದ ವಿರುದ್ಧದ ಟೀಕೆಯನ್ನು ಹರಿತಗೊಳಿಸಿದರು.

ವಿಪಕ್ಷಗಳ ಆರೋಪಗಳು ‘ಅತಿರೇಕ’ ಎಂದು ಹೇಳುವ ಮೂಲಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದರು.

ಆದರೆ, ಈ ವಿಚಾರವಾಗಿ ಮಾತನಾಡಲು ಅವಕಾಶ ಸಿಗದೇ ಇದ್ದಾಗ, ‘ಇಂಡಿಯಾ’ ಒಕ್ಕೂಟದ ಸಂಸದರು ಉಭಯ ಸದನಗಳಿಂದ ಹೊರ ನಡೆದರಲ್ಲದೇ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಸ್ಪಷ್ಟ ಸಂದೇಶ: ಸಂಸತ್ ಪ್ರವೇಶಿಸುವ ಮೊದಲೇ ‘ಮಕರ ದ್ವಾರ’ದಲ್ಲಿ ವಿರೋಧ ಪಕ್ಷಗಳು ಭಾರಿ ಪ್ರತಿಭಟನೆ ನಡೆಸಿದವು. ಆ ಮೂಲಕ, ಬಜೆಟ್ ವಿಚಾರವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧರಾಗಿಯೇ ಬಂದಿದ್ದೇವೆ ಎಂಬ ಸ್ಪಷ್ಟ ಸಂದೇಶ ರವಾನಿಸಿದವು.

‘ಕೇಂದ್ರ ಸರ್ಕಾರ ಹಣದುಬ್ಬರವನ್ನು ಬಹಳ ಲಘುವಾಗಿ ಪರಿಗಣಿಸಿದೆ ಹಾಗೂ ಕೇವಲ ಎರಡು ರಾಜ್ಯಗಳ ಹಿತಾಸಕ್ತಿಗಳನ್ನು ಪೋಷಿಸುತ್ತಿದೆ. ಇದು ಭಾರತದ ಒಕ್ಕೂಟ ರಚನೆ ಮೇಲಿನ ಆಕ್ರಮಣ’ ಎಂದು ಪ್ರತಿಭಟನೆ ನಿರತ ಸಂಸದರು ಟೀಕಿಸಿದರು.

ಸಂಸದರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಅಖಿಲೇಶ್ ಯಾದವ್ ಸೇರಿದಂತೆ ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ, ಡಿಎಂಕೆ, ಎಡಪಕ್ಷಗಳ ಸಂಸದರು ಸಂಸತ್ನ ಹೊರಗೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು, ಕನ್ನಡ, ಹಿಂದಿ, ಮರಾಠಿ, ಬಂಗಾಳಿ, ಇಂಗ್ಲಿಷ್ ಹಾಗೂ ಮಲಯಾಳಿ ಭಾಷೆಗಳಲ್ಲಿ ಬರೆದಿದ್ದ ಭಿತ್ತಿಫಲಕಗಳನ್ನು ಪ್ರದರ್ಶಿಸಿದರು.

ಕಲಾಪ–ಸಭಾತ್ಯಾಗ: ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ, ಬಜೆಟ್ನಲ್ಲಿ ಆಗಿರುವ ತಾರತಮ್ಯ ಕುರಿತು ಮಾತನಾಡಲು ಅವಕಾಶ ನೀಡುವಂತೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ‘ಇಂಡಿಯಾ’ ಒಕ್ಕೂಟದ ಸದಸ್ಯರು ಪಟ್ಟು ಹಿಡಿದರು.

ಲೋಕಸಭೆಯಲ್ಲಿ, ಸಂಸದೀಯ ಸಂಪ್ರದಾಯಗಳನ್ನು ಪಾಲನೆ ಮಾಡುವಂತೆ ಸೂಚಿಸಿದ ಸ್ಪೀಕರ್ ಓಂ ಬಿರ್ಲಾ ಅವರು, ಪ್ರಶ್ನೋತ್ತರ ಸಮಯಕ್ಕೆ ಅಡ್ಡಿ ಮಾಡದಂತೆ ಎಚ್ಚರಿಸಿದರು.

‘ವ್ಯವಸ್ಥಿತ ರೀತಿ’ಯಲ್ಲಿ ಕಲಾಪಕ್ಕೆ ಅಡ್ಡಿಯನ್ನುಂಟು ಮಾಡುತ್ತಿದ್ದೀರಿ’ ಎಂದು ವಿರೋಧ ಪಕ್ಷಗಳ ಸಂಸದರನ್ನು ಟೀಕಿಸಿದರು.

‘ಪ್ರವೇಶ ದ್ವಾರದಲ್ಲಿ ವಿರೋಧ ಪಕ್ಷಗಳ ಸಂಸದರು ನಡೆಸುತ್ತಿದ್ದ ಪ್ರತಿಭಟನೆ ಪರಿಣಾಮ ಸಂಸತ್ ಪ್ರವೇಶಿಸುವಲ್ಲಿ ತಮಗೆ ತೊಂದರೆಯಾಯಿತು ಎಂಬುದಾಗಿ ಕೆಲ ಸಂಸದರು ಲಿಖಿತವಾಗಿ ದೂರು ನೀಡಿದ್ದಾರೆ’ ಎಂದು ಹೇಳಿದ ಸ್ಪೀಕರ್ ಬಿರ್ಲಾ, ವಿರೋಧ ಪಕ್ಷಗಳು ಪ್ರಸ್ತಾಪಿಸಿದ ವಿಷಯ ಕುರಿತು ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದರು.

ಇದನ್ನು ಪ್ರತಿಭಟಿಸಿ ‘ಇಂಡಿಯಾ’ ಒಕ್ಕೂಟದ ಸಂಸದರು ಸಭಾತ್ಯಾಗ ಮಾಡಿದರು.

ಅಧಿಕಾರದ ದಾಹದಿಂದಾಗಿ ಇತರ ರಾಜ್ಯಗಳನ್ನು ಬಜೆಟ್ನಲ್ಲಿ ನಿರ್ಲಕ್ಷಿಸಲಾಗಿದೆ. ‘ಇಂಡಿಯಾ’ ಒಕ್ಕೂಟವು ಕೇಂದ್ರದ ಈ ತಾರತಮ್ಯ ನೀತಿ ಖಂಡಿಸಿ ಹಾಗೂ ಎಲ್ಲ ರಾಜ್ಯಗಳಿಗೆ ಸಮಾನ ನ್ಯಾಯ ಒದಗಿಸುವುದಕ್ಕಾಗಿ ತನ್ನ ಹೋರಾಟವನ್ನು ಮುಂದುವರಿಸಲಿದೆ

-ರಾಹುಲ್ ಗಾಂಧಿ ಕಾಂಗ್ರೆಸ್ ಸಂಸದ

ಕೇಂದ್ರ ಸರ್ಕಾರ ಹಣದುಬ್ಬರವನ್ನು ಬಹಳ ಲಘುವಾಗಿ ತೆಗೆದುಕೊಳ್ಳುತ್ತಿದೆ. ದೇಶದ ಪ್ರತಿಯೊಂದು ಕುಟುಂಬವೂ ಬೆಲೆ ಏರಿಕೆಯಿಂದ ತತ್ತರಿಸಿದೆ

-ಪಿ.ಚಿದಂಬರಂ ಕಾಂಗ್ರೆಸ್ ಸಂಸದ

ಪ್ರಧಾನಿ ನರೇಂದ್ರ ಮೋದಿ ಅವರು ದುರ್ಬಲವಾದ ಮೈತ್ರಿ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಈ ಸರ್ಕಾರ ಮಂಡಿಸಿರುವ ಬಜೆಟ್ ಜನವಿರೋಧಿಯಾಗಿದ್ದು ಬಿಜೆಪಿಯ ಮಿತ್ರಪಕ್ಷಗಳನ್ನು ಓಲೈಸುವ ಉದ್ದೇಶ ಹೊಂದಿದೆ

-ಅಭಿಷೇಕ್ ಬ್ಯಾನರ್ಜಿ ಟಿಎಂಸಿ ಲೋಕಸಭಾ ಸದಸ್ಯ

ಭಾರತದ ಅರ್ಥ ವ್ಯವಸ್ಥೆ ಎಂಬ ಗಾಡಿಯ ಬ್ರೇಕುಗಳು ಮುರಿದು ಬಿದ್ದಿದ್ದರೂ ಕೇಂದ್ರ ಸರ್ಕಾರ ಮಾತ್ರ ಜೋರಾಗಿ ಹಾರ್ನ್ ಮಾಡುತ್ತಿದೆ

-ಶಶಿ ತರೂರ್ ಕಾಂಗ್ರೆಸ್ ಸಂಸದ

ರಾಜ್ಯಸಭೆಯಲ್ಲಿ ನಿರ್ಮಲಾ ಸೀತಾರಾಮನ್ ವಾಗ್ದಾಳಿ

ನವದೆಹಲಿ: ಕೇಂದ್ರ ಬಜೆಟ್ನಲ್ಲಿ ಬಿಹಾರ ಮತ್ತು ಆಂಧ್ರಪ್ರದೇಶ ಹೊರತುಪಡಿಸಿ ವಿಪಕ್ಷಗಳ ಆಡಳಿತವಿರುವ ರಾಜ್ಯಗಳನ್ನು ನಿರ್ಲಕ್ಷಿಸಲಾಗಿದೆ ಎಂದು ರಾಜ್ಯಸಭೆಯಲ್ಲೂ ‘ಇಂಡಿಯಾ’ ಸಂಸದರು ಆರೋಪಿಸಿದರು.

ಈ ಆರೋಪಗಳನ್ನು ತಳ್ಳಿ ಹಾಕಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ‘ಇಂಡಿಯಾ’ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. ‘ವಿರೋಧ ಪಕ್ಷಗಳ ಮಾಡುತ್ತಿರುವ ಈ ಆರೋಪ ಅತಿರೇಕದಿಂದ ಕೂಡಿದೆ. ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳ ಸರ್ಕಾರಗಳು ಈ ಹಿಂದೆ ಮಂಡಿಸಿದ ಬಜೆಟ್ಗಳಲ್ಲಿ ಎಲ್ಲ ರಾಜ್ಯಗಳ ಕುರಿತು ಪ್ರಸ್ತಾಪವೇ ಆಗಿರಲಿಲ್ಲ’ ಎಂದು ತಿರುಗೇಟು ನೀಡಿದರು.

‘ಒಂದು ರಾಜ್ಯದ ಹೆಸರು ಬಜೆಟ್ ಭಾಷಣದಲ್ಲಿ ಪ್ರಸ್ತಾಪಗೊಂಡಿಲ್ಲ ಎಂದ ಮಾತ್ರಕ್ಕೆ ಆ ರಾಜ್ಯಕ್ಕೆ ಸಂಬಂಧಿಸಿ ಕೇಂದ್ರ ಯಾವುದೇ ಯೋಜನೆ ರೂಪಿಸಿಲ್ಲ ಎಂದರ್ಥವಲ್ಲ’ ಎಂದರು. ‘ಈ ಹಿಂದಿನ ಎರಡು ಬಜೆಟ್ ಭಾಷಣಗಳಲ್ಲಿ ಮಹಾರಾಷ್ಟ್ರ ಹೆಸರನ್ನು ಪ್ರಸ್ತಾಪ ಮಾಡಿರಲಿಲ್ಲ. ಆದರೆ ರಾಜ್ಯದ ದಹಾನುವಿನಲ್ಲಿ ₹76 ಸಾವಿರ ಕೋಟಿ ವೆಚ್ಚದಲ್ಲಿ ವಧವಾನ್ ಬಂದರು ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕಳೆದ ತಿಂಗಳು ಅನುಮೋದನೆ ನೀಡಿದೆ’ ಎಂದರು.

ನಿಯಮ 267ರಡಿ ಈ ವಿಷಯ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂಬ ವಿಪಕ್ಷಗಳ ಮನವಿಯನ್ನು ಸಭಾಪತಿ ಜಗದೀಪ್ ಧನಕ್ ತಿರಸ್ಕರಿಸಿದರು. ಆಗ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ‘ಪ್ರಸಕ್ತ ಸಾಲಿನಲ್ಲಿ ಬಜೆಟ್ನಲ್ಲಿ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಮಾತ್ರ ಅನುದಾನ ಹಾಗೂ ಯೋಜನೆಗಳನ್ನು ಹಂಚಿಕೆ ಮಾಡಲಾಗಿದೆ’ ಎಂದು ಹೇಳಿದರು. ‘ಇತರ ಎಲ್ಲ ರಾಜ್ಯಗಳ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾವವೇ ಇಲ್ಲ’ ಎಂದ ಖರ್ಗೆ ‘ಈ ಬಜೆಟ್ ಸರ್ಕಾರ ತನ್ನ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಸಿದ್ಧಪಡಿಸಿರುವ ದಸ್ತಾವೇಜು’ ಎಂದು ಟೀಕಿಸಿದರು.

ಆಗ ಈ ವಿಷಯ ಕುರಿತು ಉತ್ತರಿಸುವಂತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಭಾಪತಿ ಧನಕರ್ ಸೂಚಿಸಿದರು. ಕೂಡಲೇ ಖರ್ಗೆ ನೇತೃತ್ವದಲ್ಲಿ ‘ಇಂಡಿಯಾ’ ಒಕ್ಕೂಟದ ಸಂಸದರು ಸಭಾತ್ಯಾಗ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.