ಮುಂಬೈ: ಆರ್ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಗಾಯಕ ಅದ್ನಾನ್ ಸಮಿ ಅವರೊಂದಿಗೆ ಭೋಜನ ಮಾಡಿರುವುದಕ್ಕೆ ಕಾಂಗ್ರೆಸ್, ಶಿವಸೇನಾ ವಾಗ್ದಾಳಿ ನಡೆಸಿವೆ.

‘ಅದ್ನಾನ್ ಸಮಿ ಅವರ ತಂದೆ ಅರ್ಷದ್ ಸಮಿ ಖಾನ್ ಪಾಕಿಸ್ತಾನ ವಾಯುಪಡೆಯ ಪೈಲಟ್ ಆಗಿದ್ದವರು. 1965ರ ಯುದ್ಧದ ಸಮಯದಲ್ಲಿ ಪಠಾಣ್ಕೋಟ್ ವಾಯುನೆಲೆಯನ್ನು ಅವರು ನಾಶಪಡಿಸಿದ್ದರು. ಆದರೆ, ಇದೀಗ ಮೋಹನ್ ಭಾಗವತ್ ಅವರು ಖಾನ್ ಅವರ ಪುತ್ರನೊಂದಿಗೆ ಭೋಜನ ಮಾಡಿದ್ದಾರೆ’ ಎಂದು ಕಾಂಗ್ರೆಸ್ ‘ಎಕ್ಸ್’ನಲ್ಲಿ ಟೀಕಿಸಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್ಎಸ್ಎಸ್) ‘ರಾಷ್ಟ್ರ ದ್ರೋಹಿ’ ಸಂಘಟನೆ ಎಂದೂ ವಾಗ್ದಾಳಿ ನಡೆಸಿದೆ.

‘ಅದ್ನಾನ್ ಜೊತೆ ಊಟ ಮಾಡುವ ಮೂಲಕ ಆರ್ಎಸ್ಎಸ್ ದೇಶಕ್ಕೆ ಏನು ಸ್ಫೂರ್ತಿ ನೀಡುತ್ತಿದೆ’ ಎಂದು ಶಿವಸೇನಾ (ಉದ್ಧವ್ ಬಣ) ಸಂಸದ ಸಂಜಯ್ ರಾವುತ್ ಪ್ರಶ್ನಿಸಿದ್ದಾರೆ.

ಮೋಹನ್ ಭಾಗವತ್ ಅವರ ಜೊತೆ ಭೋಜನ ಮಾಡಿದ ಫೋಟೊಗಳನ್ನು ಅದ್ನಾನ್ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಭಾನುವಾರ ಹಂಚಿಕೊಂಡಿದ್ದರು. ಸರಸಂಘ ಚಾಲಕರ ಬಗ್ಗೆ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದರು.

ಚಾಪೆ ಕೆಳಗೆ ನುಸುಳುತ್ತಿರುವ ಆರ್ಎಸ್ಎಸ್:

ಆರ್ಎಸ್ಎಸ್ ಶತಮಾನೋತ್ಸವದ ಅಂಗವಾಗಿ ಮುಂಬೈನಲ್ಲಿ ವಾರಾಂತ್ಯದಲ್ಲಿ ನಡೆದ ಎರಡು ದಿನದ ಕಾರ್ಯಕ್ರಮದಲ್ಲಿ ಗಾಯಕರು ಸೇರಿದಂತೆ ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್, ವಿಕ್ಕಿ ಕೌಶಲ್, ರವೀನಾ ಟಂಡನ್ ಮತ್ತು ಶಿಲ್ಪಾ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

‘ಆರ್ಥಿಕ ಅಪರಾಧಕ್ಕಾಗಿ ಲುಕ್ಔಟ್ ನೋಟಿಸ್ ಹೊಂದಿರುವ ನಟಿಯೂ ಕೂಡ ಈ ಕಾರ್ಯಕ್ರಮದಲ್ಲಿ ಇದ್ದರು. ಆಕೆಯ ಪತಿ ನೀಲಿಚಿತ್ರಗಳನ್ನು ಮಾಡುತ್ತಿದ್ದಾರೆ ಎಂಬ ಆರೋಪವಿದೆ’ ಎಂದು ಯಾರೊಬ್ಬರ ಹೆಸರನ್ನು ಪ್ರಸ್ತಾಪಿಸದೆ ರಾವುತ್ ಟೀಕಿಸಿದ್ದಾರೆ.

‘ದೇಶದ ಜನರಿಗೆ ಯಾವ ಸಂದೇಶ ನೀಡುತ್ತಿದ್ದೀರಿ? ಪಾಪಗಳನ್ನು ಪರಿಹರಿಸಲು ಚಾಪೆ ಕೆಳಗೆ ಸಂಘವು ಪ್ರಯತ್ನಿಸುತ್ತಿದೆಯೇ?’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ದೇಶವು ಅಮೆರಿಕದ ‘ಗುಲಾಮ’ ಆಗುತ್ತಿದ್ದು, ಇದರ ಹೊಣೆಯನ್ನು ಸಂಘ ಹೊರಬೇಕು’ ಎಂದು ರಾವುತ್ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.