ಬೆಂಗಳೂರು: ಸಾಂಘಿಕ ಬೌಲಿಂಗ್ ಪ್ರದರ್ಶನ ನೀಡಿದ ಕರ್ನಾಟಕ ತಂಡವು, ರಾಮನಗರದ ಕೌಶಿಕಿ ಕ್ರಿಕೆಟ್ ಮೈದಾನದಲ್ಲಿ ನಡೆದ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಎಲೀಟ್ ಡಿ ಗುಂಪಿನ ಪಂದ್ಯದಲ್ಲಿ ಆತಿಥೇಯ ಉತ್ತರಾಖಂಡ ತಂಡವನ್ನು 197 ರನ್ಗಳಿಂದ ಸೋಲಿಸಿತು.

ಈ ಗೆಲುವಿನೊಂದಿಗೆ ಕರ್ನಾಟಕ 51 ಅಂಕಗಳೊಡನೆ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಛತ್ತೀಸಗಢ (60 ಅಂಕ) ಮತ್ತು ಉತ್ತರ ಪ್ರದೇಶ (52) ಮೊದಲ ಎರಡು ಸ್ಥಾನದಲ್ಲಿವೆ.

ಭಾನುವಾರ 7 ವಿಕೆಟ್ಗಳೊಡನೆ 122 ರನ್ ಗಳಿಸಿದ್ದ ಉತ್ತರಾಖಂಡ ಪಂದ್ಯದ ಅಂತಿಮ ದಿನವಾದ ಸೋಮವಾರ ಬೇಗ ಶರಣಾಗಬಹುದೆಂಬ ನಿರೀಕ್ಷೆಯಿತ್ತು. ಆದರೆ ಸೋಲುವ ಮೊದಲು ಹೋರಾಟ ತೋರಿತು. ಇಶಾಗ್ರ ಜಗೂರಿ (88) ಅವರು ದೇವಾಂಶ್ ಜೊತೆ ಎಂಟನೇ ವಿಕೆಟ್ಗೆ 103 ರನ್ ಸೇರಿಸಿದರು.

ಕರ್ನಾಟಕ ತಂಡವು ತನ್ನ ಮುಂದಿನ ಪಂದ್ಯವನ್ನು ಇದೇ 13 ರಿಂದ 16ರವರೆಗೆ ಹಿಮಾಚಲ ಪ್ರದೇಶ ವಿರುದ್ಧ ಆಡಲಿದೆ.

ಸಂಕ್ಷಿಪ್ತ ಸ್ಕೋರು:

ಕರ್ನಾಟಕ: 244 ಮತ್ತು 8 ವಿಕೆಟ್ಗೆ 368 ಡಿ;

ಉತ್ತರಾಖಂಡ: 160 ಮತ್ತು 61.3 ಓವರುಗಳಲ್ಲಿ 255 (ಆದಿತ್ಯ ನೈತಾನಿ 31, ಇಶಾಗ್ರ ಜಗೂರಿ 88, ಜಸ್ಕರನ್ 27, ದೇವಾಂಶ್ 45; ಮನ್ವಂತಕುಮಾರ್ ಎಲ್. 62ಕ್ಕೆ3, ಸಮಿತ್ ದ್ರಾವಿಡ್ 39ಕ್ಕೆ2, ಹಾರ್ದಿಕ್ ರಾಜ್ 66ಕ್ಕೆ3, ಶಶಿ ಕುಮಾರ್ ಕೆ. 24ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.