ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆ, ಕಲಿಕೆ, ನಾವೀನ್ಯತೆಗೆ ಹೆಚ್ಚಿನ ಆದ್ಯತೆ: ಪ್ರಧಾನಿ ಮೋದಿ

Published 23 ಏಪ್ರಿಲ್ 2024, 4:31 IST
Last Updated 23 ಏಪ್ರಿಲ್ 2024, 4:31 IST
ಅಕ್ಷರ ಗಾತ್ರ

ನವದೆಹಲಿ: ನಮ್ಮ ಸರ್ಕಾರವು ಸಂಶೋಧನೆ, ಕಲಿಕೆ ಮತ್ತು ನಾವೀನ್ಯತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ಲಂಡನ್ ಮೂಲದ ಉನ್ನತ ಶಿಕ್ಷಣ ವಿಶ್ಲೇಷಣಾ ಸಂಸ್ಥೆ ಕ್ವಾಕ್ವೆರೆಲ್ಲಿ ಸೈಮಂಡ್ಸ್ (ಕ್ಯೂಸ್) ಅಧ್ಯಕ್ಷ ನಂಝಿಯೊ ಕ್ವಾಕ್ವೆರೆಲ್ಲಿ, ಭಾರತದ ವಿಶ್ವವಿದ್ಯಾನಿಲಯಗಳಲ್ಲಿನ ಕಾರ್ಯಕ್ಷಮತೆಯಲ್ಲಿ ಗಣನೀಯ ಸುಧಾರಣೆ ಕುರಿತು ಶ್ಲಾಘನೆ ಮಾಡಿದ ಬೆನ್ನಲ್ಲೇ ಪ್ರಧಾನಿ ಮೋದಿ ಈ ಕುರಿತಾಗಿ ಪ್ರತಿಕ್ರಿಯಿಸಿದ್ದಾರೆ.

ಈ ವರ್ಷ ಎಲ್ಲ ಜಿ20 ರಾಷ್ಟ್ರಗಳ ಪೈಕಿ ಭಾರತೀಯ ವಿಶ್ವವಿದ್ಯಾನಿಲಯಗಳು ಅತ್ಯಧಿಕ ಕಾರ್ಯಕ್ಷಮತೆಯ ಸುಧಾರಣೆ ಕಂಡಿವೆ. ವರ್ಷದಿಂದ ವರ್ಷಕ್ಕೆ ಸರಾಸರಿ ರ‍್ಯಾಂಕಿಂಗ್‌ನಲ್ಲಿ ಶೇ 14ರಷ್ಟು ಸುಧಾರಣೆ ಸಾಧಿಸಿವೆ ಎಂದು ಕ್ವಾಕ್ವೆರೆಲ್ಲಿ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, 'ಇದು ನಿಜಕ್ಕೂ ಹುರಿದುಂಬಿಸುತ್ತಿದೆ. ನಮ್ಮ ಸರ್ಕಾರವು ಸಂಶೋಧನೆ, ಕಲಿಕೆ ಮತ್ತು ನಾವೀನ್ಯತೆಗಳ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸುತ್ತಿದೆ. ಇದರಿಂದ ನಮ್ಮ ಯುವಶಕ್ತಿಗೆ ಪ್ರಯೋಜನ ಸಿಗಲಿದೆ' ಎಂದು ಹೇಳಿದ್ದಾರೆ.

ಭಾರತದ ವಿಶ್ವವಿದ್ಯಾನಿಲಯಗಳ ಪೈಕಿ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು) ಅತ್ಯುತ್ತಮ ಶ್ರೇಣಿಯ ವಿಶ್ವವಿದ್ಯಾನಿಲಯವಾಗಿ ಹೊರಹೊಮ್ಮಿದೆ. ಅಭಿವೃದ್ಧಿ ಅಧ್ಯಯನದಲ್ಲಿ ಜೆಎನ್‌ಯು ಜಾಗತಿಕವಾಗಿ 20ನೇ ಸ್ಥಾನ ಪಡೆದಿದೆ.

ಬ್ಯುಸಿನೆಸ್ ಹಾಗೂ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಐಐಎಂ-ಅಹಮದಾಬಾದ್ ಜಾಗತಿಕವಾಗಿ ಟಾಪ್ 25ರಲ್ಲಿ ಮತ್ತು ಐಐಎಂ-ಬೆಂಗಳೂರು ಹಾಗೂ ಐಐಎಂ-ಕಲ್ಕತ್ತ ಟಾಪ್ 50ರಲ್ಲಿ ಸ್ಥಾನ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT