ನವದೆಹಲಿ: 2012ರಿಂದ 2024ರ ಆರ್ಥಿಕ ವರ್ಷದ ಅವಧಿಯಲ್ಲಿ ಕೃಷಿ ವಲಯದ ಒಟ್ಟು ಉತ್ಪಾದನಾ ಮೌಲ್ಯವು (ಜಿವಿಒ) ಶೇ 54.6ರಷ್ಟು ಏರಿಕೆಯಾಗಿದೆ. ಈ ಮೂಲಕ ಕೃಷಿ ಮತ್ತು ಸಂಬಂಧಿತ ವಲಯದ ಒಟ್ಟು ಉತ್ಪಾದನಾ ಮೌಲ್ಯ ₹19.08 ಲಕ್ಷ ಕೋಟಿಗಳಿಂದ 29.49 ಲಕ್ಷ ಕೋಟಿಗೆ ತಲುಪಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಶುಕ್ರವಾರ ತಿಳಿಸಿದೆ.

ಇದೇ ಅವಧಿಯಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಒಟ್ಟು ಮೌಲ್ಯ ವರ್ಧನೆಯು (ಜಿವಿಎ) ಶೇ 255ರಷ್ಟು ಹೆಚ್ಚಳವಾಗಿದ್ದು, ₹15.02 ಲಕ್ಷ ಕೋಟಿಗಳಿಂದ ₹48.78 ಲಕ್ಷ ಕೋಟಿಗೆ ತಲುಪಿದೆ ಎಂದೂ ಇಲಾಖೆಯ ತನ್ನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದೆ. ಬೆಳೆ, ಜಾನುವಾರು (ಪಶು ಸಂಗೋಪನೆ), ಕೃಷಿ ಅರಣ್ಯ (ಮರ ಬೆಳೆಸುವುದು ಹಾಗೂ ಮಾರಾಟ), ಮೀನುಗಾರಿಕೆ–ಮೀನು ಸಾಕಾಣಿಕೆ ಕ್ಷೇತ್ರಗಳ ಒಟ್ಟು ಉತ್ಪಾದನಾ ಮೌಲ್ಯವನ್ನು ಈ ದತ್ತಾಂಶದ ವರದಿಯು ಒಳಗೊಂಡಿದೆ.

ಬೆಳೆ ವಲಯದ ಒಟ್ಟು ಉತ್ಪಾದನಾ ಮೌಲ್ಯವು 15.95 ಲಕ್ಷ ಕೋಟಿಗಳಾಗಿದ್ದು, ಕೃಷಿ ಹಾಗೂ ಸಂಬಂಧಿತ ವಲಯದ ಒಟ್ಟು ಉತ್ಪಾದನಾ ವಲಯಕ್ಕೆ ಬೆಳೆ ಕ್ಷೇತ್ರದ ಕೊಡುಗೆ ಹೆಚ್ಚಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.