ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಜೋರಾಂ: ಬಿರುಗಾಳಿ ಸಹಿತ ಮಳೆಯಿಂದ 2,500 ಕಟ್ಟಡಗಳಿಗೆ ಹಾನಿ

Published 3 ಏಪ್ರಿಲ್ 2024, 15:39 IST
Last Updated 3 ಏಪ್ರಿಲ್ 2024, 15:39 IST
ಅಕ್ಷರ ಗಾತ್ರ

ಐಜ್ವಾಲ್‌: ಕಳೆದ ಮೂರು ದಿನಗಳಲ್ಲಿ ಮಿಜೋರಾಂನಲ್ಲಿ ಅಬ್ಬರಿಸಿದ ಬಿರುಗಾಳಿ ಸಹಿತ ಮಳೆಯಿಂದಾಗಿ 2,500ಕ್ಕೂ ಅಧಿಕ ಮನೆಗಳು, ಶಾಲೆಗಳು ಮತ್ತು ಸರ್ಕಾರಿ ಕಟ್ಟಡಗಳು ಹಾನಿಗೊಂಡಿವೆ ಮತ್ತು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

‘ಮಿಜೋರಾಂನ ಕೆಲವೆಡೆ ಭಾನುವಾರದಿಂದ ಮಂಗಳವಾರದವರೆಗೆ ಸುರಿದ ಭೀಕರ ಗಾಳಿ ಮತ್ತು ಆಲಿಕಲ್ಲು ಸಹಿತವಾದ ಮಳೆಯಿಂದ ಬಹಳ ಹಾನಿ ಸಂಭವಿಸಿದೆ. ಗಾಳಿಗೆ ಮರವೊಂದು ಉರುಳಿಬಿದ್ದ ಪರಿಣಾಮ ಮಹಿಳೆಯೊಬ್ಬರು(45) ಮೃತಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ. 

ರಾಜ್ಯ ವಿಪತ್ತು ನಿರ್ವಹಣೆ ಮತ್ತು ಪುನರ್ವಸತಿ ಇಲಾಖೆ ಅಧಿಕಾರಿಗಳ ಪ್ರಕಾರ, 5 ಜಿಲ್ಲೆಗಳ 15 ಚರ್ಚ್‌ಗಳು, 5 ಜಿಲ್ಲೆಗಳ 17 ಶಾಲೆಗಳು, 2 ಜಿಲ್ಲೆಗಳಲ್ಲಿನ 11 ಪರಿಹಾರ ಶಿಬಿರಗಳು, 11 ಅಂಗನವಾಡಿ ಕೇಂದ್ರಗಳು ಮತ್ತು ಹಲವು ಸರ್ಕಾರಿ ಕಚೇರಿಗಳು ಸೇರಿದಂತೆ 2,500 ಕಟ್ಟಡಗಳಿಗೆ ಹಾನಿಯಾಗಿದೆ.

ಮಿಜೋರಾಂನ ಉತ್ತರದಲ್ಲಿರುವ ಕೊಲಸಿಬ್‌ ಜಿಲ್ಲೆಯಲ್ಲಿ ಹೆಚ್ಚು ಹಾನಿ ಸಂಭವಿಸಿದ್ದು, 795 ಮನೆಗಳು, 7 ಶಾಲೆಗಳು, 6 ಚರ್ಚ್‌ಗಳು, 8 ಅಂಗನವಾಡಿ ಕೇಂದ್ರಗಳು ಮತ್ತು 11 ನೌಕರರ ವಸತಿ ಕೇಂದ್ರಗಳು ಸೇರಿದಂತೆ  800ಕ್ಕೂ ಅಧಿಕ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT