ಭುವನೇಶ್ವರ: ಒಡಿಶಾದ ಗ್ರಾಮೀಣಾಭಿವೃದ್ಧಿ ವಿಭಾಗದ ಮುಖ್ಯ ಎಂಜಿನಿಯರೊಬ್ಬರ ಮನೆ ಮತ್ತು ನಿವಾಸದ ಮೇಲೆ ದಾಳಿ ನಡೆಸಿರುವ ಪೊಲೀಸ್ ಇಲಾಖೆ ಭ್ರಷ್ಟಾಚಾರ ನಿಗ್ರಹ ಪಡೆಯ ಅಧಿಕಾರಿಗಳು, ₹2 ಕೋಟಿ ನಗದು ವಶಕ್ಕೆ ಪಡೆದಿದ್ದಾರೆ.

ಆದಾಯ ಮೀರಿದ ಆಸ್ತಿ ಹೊಂದಿರುವ ಮಾಹಿತಿ ಆಧರಿಸಿ ಗುಪ್ತದಳ ಸಿಬ್ಬಂದಿ ಅಧಿಕಾರಿಯ ಮನೆ ಮತ್ತು ಕಚೇರಿಯ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದರು.

ಅಧಿಕಾರಿಗೆ ಸೇರಿದ ಭುವನೇಶ್ವರದ ಫ್ಲ್ಯಾಟ್ನಲ್ಲಿ ₹ 1 ಕೋಟಿ ನಗದು, ಅಂಗುಲ್ ಜಿಲ್ಲೆಯ ಸಾರಂಗಿಯ ನಿವಾಸದಲ್ಲಿ ₹1 ಕೋಟಿ ಪತ್ತೆಯಾಗಿದೆ ಎಂದು ಹೇಳಿಕೆ ತಿಳಿಸಿದೆ.

ದಾಳಿ ನಡೆಸಿದ ತಕ್ಷಣ ಬೈಕುಂಠ ನಾಥ್ ಸಾರಂಗಿ ಅವರು ಕಿಟಕಿಯಿಂದ ₹500ರ ನೋಟುಗಳ ಕಂತೆಯನ್ನು ಎಸೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.