ನವದೆಹಲಿ: ಭಾರತ ನಡೆಸಿದ ಆಪರೇಷನ್ ಸಿಂಧೂರ ದಾಳಿಯಲ್ಲಿ ಸತ್ತ 5 ಭಯೋತ್ಪಾದಕರ ಗುರುತು ಪತ್ತೆಯಾಗಿದ್ದು ಅವರ ಅಂತ್ಯಸಂಸ್ಕಾರದಲ್ಲಿ ಪಾಕಿಸ್ತಾನದ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.

ಮೇ 7ರಂದು ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ಜೈಷ್–ಎ–ಮೊಹಮ್ಮದ್, ಲಷ್ಕರ್-ಎ-ತಯಬಾಗೆ ಸೇರಿದ ಐವರು ಉಗ್ರರು ಹತರಾಗಿದ್ದಾರೆ.

ಮೃತಪಟ್ಟ ಭಯೋತ್ಪಾದಕರು...

1. ಮುದಸ್ಸರ್ ಖಾಡಿಯನ್ ಖಾಸ್ ಅಲಿಯಾಸ್ ಮುದಸ್ಸರ್ ಅಲಿಯಾಸ್ ಅಬು ಜುಂದಾಲ್

ಸಂಘಟನೆ: ಲಷ್ಕರ್–ಎ–ತಯಬಾ(ಎಲ್ಇಟಿ)

* ಮುರಿದ್ಕೆಯಲ್ಲಿ ‘ಮರ್ಕಜ್ ತಯಬಾ’ದ ಉಸ್ತುವಾರಿ

* ಅಂತ್ಯಕ್ರಿಯೆ ವೇಳೆ ಆತನಿಗೆ ಪಾಕಿಸ್ತಾನ ಸೇನೆಯಿಂದ ಸರ್ಕಾರಿ ಗೌರವ ಸಮರ್ಪಣೆ

* ಜಾಗತಿಕ ಉಗ್ರ ಹಫೀಜ್ ಅಬ್ದುಲ್ ರೌಫ್ ನೇತೃತ್ವದಲ್ಲಿ ಸರ್ಕಾರಿ ಶಾಲೆಯಲ್ಲಿ ಮುದಸ್ಸರ್ ಅಂತಿಮ ನಮನ ಕಾರ್ಯಕ್ರಮ

* ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಮತ್ತು ಪಂಜಾಬ್ ಮುಖ್ಯಮಂತ್ರಿ ಮರಿಯಂ ನವಾಜ್ ಪರವಾಗಿ ಪುಷ್ಪಾರ್ಚನೆ

* ಅಂತ್ಯಕ್ರಿಯೆಯಲ್ಲಿ ಪಾಕ್ ಸೇನೆಯ ಲೆಫ್ಟಿನೆಂಟ್ ಜನರಲ್ ಮತ್ತು ಪಂಜಾಬ್ ಐಜಿಪಿ ಭಾಗಿ

2. ಹಫೀಜ್ ಮೊಹಮ್ಮದ್ ಜಮೀಲ್

ಸಂಘಟನೆ: ಜೈಷ್–ಎ–ಮೊಹಮ್ಮದ್ (ಜೆಇಎಂ)

* ಜೆಇಎಂ ಸಂಸ್ಥಾಪಕ, ಜಾಗತಿಕ ಉಗ್ರ ಮೌಲಾನಾ ಮಸೂದ್ ಅಜರ್ನ ಹಿರಿಯ ಬಾಮೈದ

* ಭಹವಾಲ್ಪುರದಲ್ಲಿ ‘ಮರ್ಕಜ್ ತಯಬಾ’ದ ಉಸ್ತುವಾರಿ

* ಜೆಇಎಂಗೆ ಹಣ ಸಂಗ್ರಹಣೆ ಮಾಡುತ್ತಿದ್ದ ಮತ್ತು ಸಂಘಟನೆಗೆ ಸೇರಲು ಯುವಕರನ್ನು ಪ್ರೇರೇಪಿಸುತ್ತಿದ್ದ

3. ಮೊಹಮ್ಮದ್ ಯೂಸುಫ್ ಅಜರ್ ಅಲಿಯಾಸ್ ಉಸ್ತಾದ್ ಜಿ ಅಲಿಯಾಸ್ ಮೊಹದ್ ಸಲೀಮ್ ಅಲಿಯಾಸ್ ಘೋಸಿ ಸಾಹಬ್

ಸಂಘಟನೆ: ಜೈಷ್–ಎ–ಮೊಹಮ್ಮದ್ (ಜೆಇಎಂ)

* ಮೌಲಾನಾ ಮಸೂದ್ ಅಜರ್ನ ಕಿರಿಯ ಬಾಮೈದ

* ಜಮ್ಮು–ಕಾಶ್ಮೀರದ ಹಲವು ಭಯೋತ್ಪಾದಕ ದಾಳಿಗಳಲ್ಲಿ ಭಾಗಿ

* 1999ರಲ್ಲಿ ನಡೆದಿದ್ದ ಐಸಿ–814 ವಿಮಾನ ಅಪಹರಣ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಭಯೋತ್ಪಾದಕ

* ಜೆಇಎಂನಲ್ಲಿ ಶಸ್ತ್ರಾಸ್ತ್ರ ತರಬೇತುದಾರ

4. ಖಲೀದ್ ಅಲಿಯಾಸ್ ಅಬು ಅಕಾಶಾ

* ಅಫ್ಗಾನಿಸ್ತಾನದಿಂದ ಶಸ್ತ್ರಾಸ್ತ್ರ ಸಾಗಣೆ ಮಾಡುತ್ತಿದ್ದ ಖಲೀದ್

* ಫೈಸಲಾಬಾದ್ನಲ್ಲಿ ನಡೆದ ಖಲೀದ್ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಗಳು ಮತ್ತು ಅಲ್ಲಿನ ಜಿಲ್ಲಾಧಿಕಾರಿ ಭಾಗಿ

5. ಮೊಹಮ್ಮದ್ ಹಸಾನ್ ಖಾನ್

ಸಂಘಟನೆ: ಜೈಷ್–ಎ–ಮೊಹಮ್ಮದ್ (ಜೆಇಎಂ)

* ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜೆಇಎಂನ ಆಪರೇಷನಲ್ ಕಮಾಂಡರ್ ಮುಫ್ತಿ ಅಸ್ಗರ್ ಖಾನ್ ಕಾಶ್ಮೀರಿಯ ಪುತ್ರ

* ಜಮ್ಮು–ಕಾಶ್ಮೀರದ ಹಲವು ಭಯೋತ್ಪಾದಕ ದಾಳಿಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ
.‘ಆಪರೇಷನ್ ಸಿಂಧೂರ’ ಮಾಹಿತಿ ನೀಡಿದ ಸೋಫಿಯಾ ಖುರೇಷಿ ನಮ್ಮ ಬೆಳಗಾವಿಯ ಸೊಸೆ.ಆಪರೇಷನ್ ಸಿಂಧೂರ: ಭಾರತದ ದಾಳಿ ದೃಢಪಡಿಸಿದ ಪಾಕ್– ಷೆಹ್ಬಾಜ್ ಷರೀಫ್ ಗುಟುರು.ಆಪರೇಷನ್ ಸಿಂಧೂರ: ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಮುಜರಾಯಿ ಇಲಾಖೆ ಸೂಚನೆ.ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ: ಸಂಸದ ಜಗದೀಶ ಶೆಟ್ಟರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.