ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋವಾ: ಪಾಕಿಸ್ತಾನ ಮೂಲದ ಕ್ರಿಶ್ಚಿಯನ್‌ಗೆ ಮೊದಲ ‘ಸಿಎಎ ಪೌರತ್ವ’

Published 28 ಆಗಸ್ಟ್ 2024, 16:27 IST
Last Updated 28 ಆಗಸ್ಟ್ 2024, 16:27 IST
ಅಕ್ಷರ ಗಾತ್ರ

ಪಣಜಿ: ಪಾಕಿಸ್ತಾನ ಮೂಲದ 78 ವರ್ಷ ವಯಸ್ಸಿನ ಕ್ರಿಶ್ಚಿಯನ್ ಧರ್ಮದ ಜೋಸೆಫ್ ಫ್ರಾನ್ಸಿಸ್ ಫೆರೀರಾ ಎನ್ನುವ ವ್ಯಕ್ತಿಗೆ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಬುಧವಾರ ಪೌರತ್ವ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. ಅವರು ಪೌರತ್ವ (ತಿದ್ದುಪಡಿ) ಕಾಯ್ದೆಯ (ಸಿಎಎ) ಅನುಸಾರ ಭಾರತದ ಪೌರತ್ವ ಪಡೆದ ಗೋವಾದ ಮೊದಲ ವ್ಯಕ್ತಿಯಾಗಿದ್ದಾರೆ.  

ದಕ್ಷಿಣ ಗೋವಾದ ಪರೋಡ ಗ್ರಾಮದವರಾದ ಜೋಸೆಫ್, ವಿದ್ಯಾಭ್ಯಾಸಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ್ದವರು, ಉದ್ಯೋಗ ಹಿಡಿದು ಅಲ್ಲಿಯೇ ನೆಲೆಸಿದ್ದರು. ಪಾಕಿಸ್ತಾನದ ಪೌರತ್ವ ಪಡೆದಿದ್ದ ಅವರು ಕರಾಚಿಯಲ್ಲಿ ವಾಸವಾಗಿದ್ದರು. ಅವರು 2013ರಲ್ಲಿ ಭಾರತಕ್ಕೆ ಹಿಂದಿರುಗಿದ್ದರು.

ಜೋಸೆಫ್ ಗೋವಾದ ಮಹಿಳೆಯನ್ನು ಮದುವೆ ಆಗಿದ್ದರೂ, ಭಾರತದ ಪೌರತ್ವ ಪಡೆಯುವ ದಿಸೆಯಲ್ಲಿ ಅವರು ಹಲವು ತೊಡಕು ಎದುರಿಸಿದರು. ನರೇಂದ್ರ ಮೋದಿ ಅವರ ಸರ್ಕಾರವು ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಿದ್ದರಿಂದಾಗಿ ಅವರಿಗೆ ಭಾರತದ ಪೌರತ್ವ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.

ಗೋವಾದಲ್ಲಿ ಭಾರತದ ಪೌರತ್ವ ಪಡೆಯಲು ಅರ್ಹರಾದವರು ಹಲವರಿದ್ದು, ಅವರ ಬಗ್ಗೆ ಸರ್ಕಾರ ಸಮೀಕ್ಷೆ ಆರಂಭಿಸಿದೆ. ಅರ್ಹರಾದವರು ಸರ್ಕಾರವನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT