ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌: ಅಮೃತಸರದ ಬಳಿ ಪಾಕಿಸ್ತಾನದ ಡ್ರೋನ್‌ ಹೊಡೆದುರುಳಿಸಿದ ಬಿಎಸ್‌ಎಫ್‌

Published 5 ಜೂನ್ 2023, 6:32 IST
Last Updated 5 ಜೂನ್ 2023, 6:32 IST
ಅಕ್ಷರ ಗಾತ್ರ

ಚಂಡೀಗಢ: ಪಂಜಾಬ್‌ನ ಅಮೃತಸರದ ಅಂತರರಾಷ್ಟ್ರೀಯ ಗಡಿಯ ಬಳಿ ಗಡಿ ಭದ್ರತಾ ಪಡೆಯು ಪಾಕಿಸ್ತಾನದ ಡ್ರೋನ್‌ ಅನ್ನು ಹೊಡೆದುರುಳಿಸಿದ್ದು, 3 ಕೆ.ಜಿಗೂ ಹೆಚ್ಚು ಹೆರಾಯಿನ್‌ ವಶಪಡಿಸಿಕೊಂಡಿದೆ ಎಂದು ಭದ್ರತಾ ಪಡೆಯ ವಕ್ತಾರರು ಸೋಮವಾರ ತಿಳಿಸಿದ್ದಾರೆ.

ಭಾನುವಾರ ರಾತ್ರಿ 9.45ರ ಸುಮಾರಿಗೆ ಡ್ರೋನ್‌ಅನ್ನು ಗಮನಿಸಿದ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಸಿಬ್ಬಂದಿ ಗುಂಡಿನ ದಾಳಿ ನಡೆಸುವ ಮೂಲಕ ಅದನ್ನು ಹೊಡೆದುರುಳಿಸಿದ್ದಾರೆ.

ಹುಡುಕಾಟದ ಸಮಯದಲ್ಲಿ, ಬಿಎಸ್‌ಎಫ್‌ ಸಿಬ್ಬಂದಿ ಅಮೃತಸರದ ರತ್ತನ್ ಖರ್ಡ್ ಗ್ರಾಮದ ಹೊಲದಿಂದ ಮೂರು ಪ್ಯಾಕೆಟ್‌ ಹೆರಾಯಿನ್‌ ಜೊತೆಗೆ ಡ್ರೋನ್‌ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಬಿಎಸ್‌ಎಫ್‌ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT