ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳ ಎ.ಸಿ ಶುಲ್ಕವನ್ನು ಪೋಷಕರೇ ಭರಿಸಬೇಕು: ದೆಹಲಿ ಹೈಕೋರ್ಟ್‌

Published 5 ಮೇ 2024, 13:05 IST
Last Updated 5 ಮೇ 2024, 13:05 IST
ಅಕ್ಷರ ಗಾತ್ರ

ನವದೆಹಲಿ: ಶಾಲೆಗಳಲ್ಲಿ ಅಳವಡಿಸುವ ಹವಾನಿಯಂತ್ರಿತ ವ್ಯವಸ್ಥೆಯ (ಎ.ಸಿ) ಶುಲ್ಕವನ್ನು ಪೋಷಕರೇ ಭರಿಸಬೇಕು ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್‌ ಅವರ ನೇತೃತ್ವದ ನ್ಯಾಯಪೀಠವು, ಖಾಸಗಿ ಶಾಲೆಯೊಂದು ತರಗತಿಗಳಲ್ಲಿ ಎ.ಸಿ ಸೌಲಭ್ಯ ಕಲ್ಪಿಸಿದ್ದಕ್ಕಾಗಿ ತಿಂಗಳಿಗೆ ₹2,000 ಶುಲ್ಕ ವಿಧಿಸಿದ್ದನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಜಾಗೊಳಿಸಿತು.

‘ಶಾಲೆಯ ನಿರ್ವಹಣೆಗೆ ತಗಲುವ ವೆಚ್ಚವನ್ನು ಆಡಳಿತ ಮಂಡಳಿಯೊಂದೇ ಭರಿಸಲು ಸಾಧ್ಯವಿಲ್ಲ. ಪೋಷಕರು  ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವ ಮೊದಲೇ ಆ ಶಾಲೆಯ ಖರ್ಚು–ವೆಚ್ಚಗಳ ಬಗ್ಗೆ ತಿಳಿದುಕೊಳ್ಳಬೇಕು’ ಎಂದು ನ್ಯಾಯಪೀಠ ಹೇಳಿತು.

ವಿದ್ಯಾರ್ಥಿಗಳಿಗೆ ಎ.ಸಿ ಸೌಲಭ್ಯ ಒದಗಿಸುವುದು ಶಾಲೆಯ ಜವಾಬ್ದಾರಿ ಎಂದು ಅರ್ಜಿದಾರರು ವಾದಿಸಿದರು.

‘ಇದು ವಿದ್ಯಾರ್ಥಿಗಳಿಗೆ ಒದಗಿಸುವ ಸೌಲಭ್ಯ. ಪ್ರಯೋಗಾಲಯ ಶುಲ್ಕ, ಸ್ಮಾರ್ಟ್‌ ತರಗತಿ ಶುಲ್ಕದಂತೆಯೇ ಇದನ್ನು ಪರಿಗಣಿಸಬಹುದು’ ಎಂದು ಕೋರ್ಟ್‌ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT