ನವದೆಹಲಿ: ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸಂಸತ್‌ನ ಮುಂಗಾರು ಅಧಿವೇಶನವು ಅತ್ಯಲ್ಪ ಅವಧಿಗೆ ಸೀಮಿತಗೊಂಡಿದೆ. ಹೀಗಾಗಿ ₹133 ಕೋಟಿ ರೂಪಾಯಿ ತೆರಿಗೆದಾರರ ಹಣ ನಷ್ಟವಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಜುಲೈ 19ರಂದು ಆರಂಭವಾದ ಮುಂಗಾರು ಅಧಿವೇಶನದಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಪೆಗಾಸಸ್ ಸೇರಿದಂತೆ ಹಲವು ಸಮಸ್ಯೆಗಳನ್ನು ಮುಂದಿಟ್ಟು ಸಂಸತ್‌ನಲ್ಲಿ ಪ್ರತಿಭಟನೆ ನಡೆಸುತ್ತಿವೆ. ಹೀಗಾಗಿ ಒಟ್ಟು 107 ಗಂಟೆಗಳ ಅಧಿವೇಶನವು ಕೇವಲ 18ಗಂಟೆಗಳಿಗೆ ಸೀಮಿತವಾಗಿದೆ. ಈವರೆಗೆ 89 ಗಂಟೆಗಳ ಅಧಿವೇಶನ ಅವಧಿ ವ್ಯರ್ಥವಾಗಿದೆ. ಆಗಸ್ಟ್ 13ರಂದು ಅಧಿವೇಶನ ಅಂತ್ಯಗೊಳ್ಳಲಿದೆ.

ಅಧಿಕೃತ ಮೂಲಗಳು ಹಂಚಿಕೊಂಡ ವಿವರಗಳ ಪ್ರಕಾರ, ರಾಜ್ಯಸಭೆಯು ನಿಗದಿತ ಸಮಯದ ಶೇ. 21ರಷ್ಟು ಕಾರ್ಯನಿರ್ವಹಿಸಿದ್ದರೆ, ಲೋಕಸಭೆಯಲ್ಲಿ ಶೇಕಡಾ 13 ಕ್ಕಿಂತ ಕಡಿಮೆ ಅವಧಿಗೆ ಕಲಾಪ ನಡೆದಿದೆ.

‘ಲೋಕಸಭೆಯು ಒಟ್ಟು 54 ಗಂಟೆಗಳಲ್ಲಿ ಕೇವಲ ಏಳು ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸಿದೆ. ರಾಜ್ಯಸಭೆಯು 53 ಗಂಟೆಗಳಲ್ಲಿ 11 ಗಂಟೆ ನಡೆದಿದೆ. ನಿರೀಕ್ಷಿತ ಅವಧಿಗೆ ಅಧಿವೇಶನ ನಡೆಯದ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ 133 ಕೋಟಿಗೂ ಹೆಚ್ಚು ನಷ್ಟಕ್ಕೆ ಉಂಟಾಗಿದೆ.

ಕಲಾಪ ಸಾಂಗವಾಗಿ ನಡೆಯದೇ ಇರುವುದಕ್ಕೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಪರಸ್ಪರ ದೂಷಿಸಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.