ನವದೆಹಲಿ: ದೇಶದಲ್ಲಿ ಐದು ನೂತನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ (ಐಐಐ-ಟಿ) ಸ್ಥಾಪನೆಯನ್ನು ಘೋಷಿಸುವ ಮಸೂದೆಯನ್ನು ಸಂಸತ್ತು ಮಂಗಳವಾರ ಅನುಮೋದಿಸಿತು.

ಸಾರ್ವಜನಿಕ- ಖಾಸಗಿ ಸಹಭಾಗಿತ್ವದಡಿ ಈ ಐಐಐ-ಟಿಗಳನ್ನು ಕ್ರಮವಾಗಿ ರಾಯಚೂರು, ಸೂರತ್, ಭೋಪಾಲ್, ಭಾಗಲ್ಪುರ ಮತ್ತು ಅಗರ್ತಲಾದಲ್ಲಿ ಸ್ಥಾಪಿಸಲಾಗಿದೆ. ಇದನ್ನು ಮಾರ್ಚ್ ತಿಂಗಳಲ್ಲಿ ಲೋಕಸಭೆ ಅಂಗೀಕರಿಸಿತ್ತು.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಅವರು ಈ ಕುರಿತ ಮಸೂದೆಯನ್ನು ಮಂಗಳವಾರ ರಾಜ್ಯಸಭೆಯಲ್ಲಿ ಮಂಡಿಸಿದರು. ದೇಶದಲ್ಲಿ 25 ಐಐಐ-ಟಿಗಳಿವೆ. ಇವುಗಳಲ್ಲಿ ಐದನ್ನು ಕೇಂದ್ರವೇ ನಡೆಸುತ್ತಿದೆ. ಉಳಿದವನ್ನು ಸಾರ್ವಜನಿಕ -ಖಾಸಗಿ ಸಹಭಾಗಿತ್ವದಡಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ನೂತನ ಐಐಐ-ಟಿಗಳು ಈಗಿರುವ ಇತರೆ 15 ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಐಐಐ-ಟಿಗಳಂತೆ ಬಿ.ಟೆಕ್, ಎಂ.ಟೆಕ್ ಮತ್ತು ಪಿಎಚ್.ಡಿ ಪದವಿ ಕೋರ್ಸ್ ನಡೆಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.