ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದುರ್ವರ್ತನೆ: ವಿಮಾನದಿಂದ ಪ್ರಯಾಣಿಕನ ಕೆಳಗಿಳಿಸಿದ ಸ್ಪೈಸ್‌ಜೆಟ್‌ ಸಿಬ್ಬಂದಿ

Last Updated 23 ಜನವರಿ 2023, 19:02 IST
ಅಕ್ಷರ ಗಾತ್ರ

ದುರ್ವರ್ತನೆ: ಪ್ರಯಾಣಿಕನ ಕೆಳಗಿಳಿಸಿದ ಸ್ಪೈಸ್‌ಜೆಟ್‌ ಸಿಬ್ಬಂದಿ ನವದೆಹಲಿ (ಪಿಟಿಐ): ಮಹಿಳಾ ಸಿಬ್ಬಂದಿ ಜೊತೆಗೆ ಅನುಚಿತ ವರ್ತನೆ ತೋರಿದ ಹಿನ್ನೆಲೆಯಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರನ್ನು ಸ್ಪೈಸ್‌ಜೆಟ್‌ ವಿಮಾನದಿಂದ ಕೆಳಗಿಳಿಸಲಾಯಿತು.

ದೆಹಲಿಯಿಂದ ಹೈದರಾಬಾದ್‌ಗೆ ತೆರಳಬೇಕಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಆತನ ಜೊತೆಗಿದ್ದ ಸಹ ಪ್ರಯಾಣಿಕನನ್ನು ಸಹ ಕೆಳಗಿಳಿಸಲಾಯಿತು ಎಂದು ವಿಮಾನ ಸಂಸ್ಥೆಯು ತಿಳಿಸಿದೆ.

ಅನುಚಿತ ವರ್ತನೆ ಜೊತೆಗೆ ಮಹಿಳಾ ಸಿಬ್ಬಂದಿಯನ್ನು ಮುಟ್ಟಲು ಪ್ರಯಾಣಿಕ ಮಂದಾಗಿದ್ದ. ಸಿಬ್ಬಂದಿಯ ಲಿಖಿತ ದೂರು ಆಧರಿಸಿ ಕ್ರಮ ಜರುಗಿಸಿದ್ದು, ಪ್ರಯಾಣಿಕನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಯಿತು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT