ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ ಸ್ವಚ್ಛತೆ: ದೂರು ಸಲ್ಲಿಸಲು ಕ್ಯುಆರ್‌ ಕೋಡ್‌

Published 18 ಫೆಬ್ರುವರಿ 2024, 13:14 IST
Last Updated 18 ಫೆಬ್ರುವರಿ 2024, 13:14 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯಾಗಿರುವ ಸವಾಯಿ ಮಾನ್‌ಸಿಂಗ್‌ (ಎಸ್‌ಎಂಎಸ್‌) ಆಸ್ಪತ್ರೆಯಲ್ಲಿ ಶುಚಿತ್ವಕ್ಕೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಕ್ಯುಆರ್‌ ಕೋಡ್‌ಗಳನ್ನು ಹಾಕಲಾಗಿದೆ.

ಆಸ್ಪತ್ರೆ ಕಟ್ಟಡದ ವಿವಿಧೆಡೆ ಹಾಗೂ ವಾರ್ಡ್‌ಗಳಲ್ಲಿ ಕ್ಯುಆರ್‌ ಕೋಡ್‌ಗಳನ್ನು ಅಂಟಿಸಲಾಗಿದೆ. ಈ ಮೂಲಕ ಹಲವು ದೂರುಗಳು ಬಂದಿವೆ ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಅಚಲ್‌ ಶರ್ಮಾ ತಿಳಿಸಿದರು.

ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ ಅವರ ಸೂಚನೆಯಂತೆ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ರೋಗಿಗಳು ಮತ್ತು  ಅವರ ಜೊತೆಗಿರುವವರು ಮೊಬೈಲ್‌ ಮೂಲಕ ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಫೋಟೊಗಳನ್ನು ಅಪ್‌ಲೋಡ್‌ ಮಾಡಬಹುದು. ಜೊತೆಗೆ ದೂರುಗಳನ್ನೂ ಸಲ್ಲಿಸಬಹುದು ಎಂದು ಅವರು ವಿವರಿಸಿದರು.

ಶುಚಿತ್ವಕ್ಕೆ ಸಂಬಂಧಿಸಿದ ದೂರುಗಳು ಮೇಲ್ವಿಚಾರಕರಿಗೆ ತಲುಪುತ್ತವೆ. ಅವರು ತುರ್ತಾಗಿ ಸಮಸ್ಯೆ ಪರಿಹರಿಸುತ್ತಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಈಚೆಗೆ ಆಸ್ಪತ್ರೆಗೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT