ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ ನಿಷೇಧ ನಿಯಮ ಉಲ್ಲಂಘನೆ: ದೆಹಲಿಯಲ್ಲಿ ತೀವ್ರ ಹದಗೆಟ್ಟ ಗಾಳಿಯ ಗುಣಮಟ್ಟ

Published 14 ನವೆಂಬರ್ 2023, 6:04 IST
Last Updated 14 ನವೆಂಬರ್ 2023, 6:04 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿದ್ದು, ಶೀಘ್ರದಲ್ಲೇ ಸುಧಾರಿಸುವುದು ಅನುಮಾನವಾಗಿದೆ.

ದೆಹಲಿಯ 40 ಮೇಲ್ವಿಚಾರಣಾ ಕೇಂದ್ರಗಳ ಪೈಕಿ ಒಂಬತ್ತು ಒದಗಿಸಿರುವ ಮಾಹಿತಿ ಪ್ರಕಾರ, ಇಂದು (ಮಂಗಳವಾರ) ಬೆಳಗ್ಗೆ 8ಕ್ಕೆ ಗಾಳಿಯ ಗುಣಮಟ್ಟ ಸೂಚ್ಯಂಕ 363 ರಷ್ಟಕ್ಕೆ ಕುಸಿದಿದೆ. ಇದು ಅತ್ಯಂತ ಕಳಪೆ ಆಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮೊಬೈಲ್‌ ಅಪ್ಲಿಕೇಶನ್ 'ಸಮೀರ್' ಪ್ರಕಾರ, ಉಳಿದ ಕೇಂದ್ರಗಳು ಅಂಕಿ-ಅಂಶಗಳನ್ನು ದಾಖಲಿಸುವಲ್ಲಿ ವಿಫಲವಾಗಿವೆ.

ಹಬ್ಬಕ್ಕೂ ಮುನ್ನ ಸುರಿದ ಮಳೆಯಿಂದಾಗಿ ದೆಹಲಿಯ ಗಾಳಿಯ ಗುಣಮಟ್ಟ ತುಸು ಸುಧಾರಣೆಯಾಗಿತ್ತು. ಆದರೆ, ಇಲ್ಲಿನ ಜನರು ನಿಯಮಾವಳಿಗಳನ್ನು ಗಾಳಿಗೆ ತೂರಿ ಭಾನುವಾರ-ಸೋಮವಾರ ಭಾರಿ ಪ್ರಮಾಣದ ಪಟಾಕಿ ಸಿಡಿಸಿದ್ದರಿಂದ ಮತ್ತೆ ವಾತಾವರಣ ಹಾಳಾಗಿದೆ. ದಟ್ಟ ಹೊಗೆ ಆವರಿಸಿದೆ.

ಸ್ವಿಸ್‌ ಗ್ರೂಪ್‌ ಐಕ್ಯೂಏರ್‌ ಸೋಮವಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ದೆಹಲಿಯು ವಿಶ್ವದ 10 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಪಾಕಿಸ್ತಾನದ ಲಾಹೋರ್‌ ಮತ್ತು ಕರಾಚಿ ನಂತರದ ಸ್ಥಾನಗಳಲ್ಲಿವೆ. ಮುಂಬೈ (4) ಮತ್ತು ಕೋಲ್ಕತ್ತ (8) ನಗರಗಳೂ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಕಳೆದ ಎಂಟು ವರ್ಷಗಳಲ್ಲೇ ಅತ್ಯುತ್ತಮ ಗಾಳಿಯ ಗುಣಮಟ್ಟ ಭಾನುವಾರ ದಾಖಲಾಗಿತ್ತು. ಆದರೆ, ಅದೇದಿನ ರಾತ್ರಿ ಸಿಡಿಸಿದ ಪಟಾಕಿಯಿಂದಾಗಿ ವಾತಾವರಣ ಮತ್ತೆ ಹದಗೆಟ್ಟಿದೆ. ಇದು ಬೇಗನೆ ಸುಧಾರಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT