ನವದೆಹಲಿ: ನ್ಯಾಯಾಲಯಗಳ ವಿಚಾರಗಳಲ್ಲಿ ಜನರಿಗೆ ಅದೆಷ್ಟು ಸಾಕಾಗಿಹೋಗಿರುತ್ತದೆ ಅಂದರೆ, ಅವರಿಗೆ ಪ್ರಕರಣಗಳು ಇತ್ಯರ್ಥವಾದರೆ ಸಾಕು ಎಂಬಂತಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಹೇಳಿದ್ದಾರೆ.

ವ್ಯಾಜ್ಯಗಳ ಇತ್ಯರ್ಥಕ್ಕೆ ಪರ್ಯಾಯ ವ್ಯವಸ್ಥೆಯಾಗಿ ಲೋಕ ಅದಾಲತ್‌ಗಳನ್ನು ಬಳಸಿಕೊಳ್ಳುವುದರ ಮಹತ್ವದ ಬಗ್ಗೆ ಹೇಳುವಾಗ ಸಿಜೆಐ ಚಂದ್ರಚೂಡ್ ಅವರು ಹೀಗೆ ಹೇಳಿದ್ದಾರೆ.

ಕೋರ್ಟ್‌ಗಳಲ್ಲಿ ವಿಚಾರಣೆಯ ಹಂತದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಲಾಗುತ್ತದೆ, ರಾಜಿ ಸಂಧಾನದ ಮೂಲಕ ಬಗೆಹರಿಸಲಾಗುತ್ತದೆ. ವಾದಿಗಳು ಹಾಗೂ ಪ್ರತಿವಾದಿಗಳು ಪರಸ್ಪರ ಒಪ್ಪಿ ಇತ್ಯರ್ಥಪಡಿಸಿದ ಪ್ರಕರಣಗಳ ವಿಚಾರದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ.

‘ಕೋರ್ಟ್ ಪ್ರಕ್ರಿಯೆಗಳೇ ಶಿಕ್ಷೆಯಂತೆ ಆಗಿರುವುದು ನ್ಯಾಯಮೂರ್ತಿಗಳಾದ ನಮಗೆ ಕಳವಳ ಮೂಡಿಸುವ ಸಂಗತಿ’ ಎಂದು ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಲೋಕ ಅದಾಲತ್ ಸಪ್ತಾಹದ ಕೊನೆಯಲ್ಲಿ ಹೇಳಿದ್ದಾರೆ.

ಪ್ರತಿ ಹಂತದಲ್ಲಿಯೂ ಲೋಕ ಅದಾಲತ್ ಆರಂಭಿಸುವುದಕ್ಕೆ ವಕೀಲರು ಹಾಗೂ ನ್ಯಾಯಮೂರ್ತಿಗಳಿಂದ ತಮಗೆ ಭಾರಿ ಸಹಕಾರ ದೊರೆಯಿತು ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.

ವಿಶೇಷ ಲೋಕ ಅದಾಲತ್ ಕಾರ್ಯಕ್ರಮವು ಆರಂಭದಲ್ಲಿ ಏಳು ನ್ಯಾಯಪೀಠಗಳೊಂದಿಗೆ ಆರಂಭವಾಯಿತು. ಆದರೆ ಗುರುವಾರದ ಹೊತ್ತಿಗೆ 13 ಪೀಠಗಳು ಅದಾಲತ್‌ನಲ್ಲಿ ಭಾಗಿಯಾಗಿದ್ದವು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.