ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಠ ಕಡಿಮೆ, ಆಟ ಹೆಚ್ಚು

2019ರ ಶೈಕ್ಷಣಿಕ ವರ್ಷದಿಂದಲೇ ಶಾಲಾ ಪಠ್ಯ ಶೇಕಡ 50ರಷ್ಟು ಕಡಿತ
Last Updated 6 ಆಗಸ್ಟ್ 2018, 20:17 IST
ಅಕ್ಷರ ಗಾತ್ರ

ನವದೆಹಲಿ: ಇನ್ನು ಮುಂದೆ ಶಾಲೆಗಳ ಕೊಠಡಿಗಳಲ್ಲಿ ಪಾಠ, ಪ್ರವಚನಗಳಿಗಿಂತ ಮೈದಾನಗಳಲ್ಲಿ ಮಕ್ಕಳ ಆಟೋಟಗಳೇ ಹೆಚ್ಚಾಗಲಿವೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳ ಪಠ್ಯದ ಹೊರೆಯನ್ನು ಶೇ 50ರಷ್ಟು ಕಡಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಶಾಲಾ ಹಂತದಿಂದಲೇ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಪಠ್ಯ ಕಲಿಕೆಯ ತರಗತಿಗಳಂತೆಯೇ ಆಟದ ಅವಧಿಯನ್ನೂ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಸೋಮವಾರ ಸಮಾರಂಭವೊಂದರಲ್ಲಿ ತಿಳಿಸಿದ್ದಾರೆ.

20 ವಿಶೇಷ ಕ್ರೀಡಾ ಶಾಲೆ: ಈ ವರ್ಷದಿಂದಲೇ ದೇಶದಲ್ಲಿ 20 ವಿಶೇಷ ಕ್ರೀಡಾ ತರಬೇತಿ ಶಾಲೆಗಳನ್ನು ತೆರೆಯಲಾಗುವುದು. ಪ್ರತಿ ಶಾಲೆಗೆ ₹7–₹10 ಕೋಟಿ ವಿನಿಯೋಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರತಿ ಕ್ರೀಡಾ ತರಬೇತಿ ಶಾಲೆಯಲ್ಲಿ ಎರಡು ಅಥವಾ ಮೂರು ಪ್ರಮುಖ ಕ್ರೀಡೆಗಳಲ್ಲಿ ಮಾತ್ರ ತರಬೇತಿ ನೀಡಲಾಗುವುದು ಎಂದು ಸಿಂಗ್‌ ತಿಳಿಸಿದ್ದಾರೆ.

ಪ್ರತಿದಿನವೂ ಶಾಲೆಗಳಲ್ಲಿ ಆಟದ ಅವಧಿ ಕಡ್ಡಾಯ

ಕ್ರೀಡೆಯನ್ನು ಹೆಚ್ಚು ಜನಪ್ರಿಯ ಮತ್ತು ಪ್ರಸ್ತುತಗೊಳಿಸಲು ಕ್ರೀಡಾ ಸಚಿವಾಲಯದಿಂದ ವಿಭಿನ್ನ ಯೋಜನೆ

2022ರ ವೇಳೆಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ಸಿಬ್ಬಂದಿಯ ಸಂಖ್ಯೆಯನ್ನು
ಶೇ 50ರಷ್ಟು ಕಡಿತಗೊಳಿಸಲು ಸರ್ಕಾರ ನಿರ್ಧಾರ

ಸಿಬ್ಬಂದಿ ಕಡಿತದಿಂದ ಉಳಿಯುವ ಹಣವನ್ನು ಕ್ರೀಡಾ ಚಟುವಟಿಕೆಗಳಿಗೆ ವಿನಿಯೋಗಿಸಲು ಚಿಂತನೆ

*ಕ್ರೀಡೆ ಕೂಡ ಒಂದು ಶಿಕ್ಷಣ. ಆದರೆ, ದೇಶದಲ್ಲಿ ಕ್ರೀಡೆಗೆ ಅಷ್ಟಾಗಿ ಮಹತ್ವ ದೊರೆಯುತ್ತಿಲ್ಲ. ಶಾಲೆಗಳಲ್ಲಿ ಆಟೋಟಗಳನ್ನು ಪಠ್ಯದ ಒಂದು ಮಹತ್ವದ ಭಾಗವಾಗಿ ಪರಿಗಣಿಸಬೇಕು

-ರಾಜ್ಯವರ್ಧನ್ ಸಿಂಗ್‌ ಠಾಥೋಡ್‌, ಕೇಂದ್ರ ಕ್ರೀಡಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT