ತಿರುವನಂತಪುರ: ಕೇರಳದಲ್ಲಿ ವಿರೋಧ ಪಕ್ಷಗಳ ವ್ಯಾಪಕ ಟೀಕೆಯ ಹೊರತಾಗಿಯೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವೈಯಕ್ತಿಕ, ರಾಜಕೀಯ ಪಯಣ ಹಾಗೂ ಆಡಳಿತಾತ್ಮಕ ಸಾಧನೆಗಳನ್ನು ತೋರಿಸುವ ಸಾಕ್ಷ್ಯಚಿತ್ರವನ್ನು ಬುಧವಾರ ಪ್ರದರ್ಶಿಸಲಾಯಿತು.

‘ಪಿಣರಾಯಿ ದಿ ಲೆಜೆಂಡ್’ ಎಂಬ 30 ನಿಮಿಷಗಳ ಸಾಕ್ಷ್ಯಚಿತ್ರವನ್ನು ಹಿರಿಯ ನಟ ಕಮಲ್ ಹಾಸನ್ ಅವರು ಬಿಡುಗಡೆ ಮಾಡಿದರು. ಪಿಣರಾಯಿ ಅವರ ಸಂಪುಟ ಸಚಿವರಾದ ವಿ. ಶಿವನ್ಕುಟ್ಟಿ, ರಾಜ್ಯಸಭಾ ಸದಸ್ಯ ಎ.ಎ.ರಹೀಂ ಮತ್ತು ಇತರ ನಾಯಕರ ಸಮ್ಮುಖದಲ್ಲಿ ಇದನ್ನು ಬಿಡುಗಡೆ ಮಾಡಲಾಯಿತು.

ವಿಜಯನ್ ಸರ್ಕಾರದ ಎರಡನೇ ಅವಧಿಯ 4ನೇ ವಾರ್ಷಿಕೋತ್ಸವ ಸ್ಮರಣಾರ್ಥ ಕೇರಳ ಸಚಿವಾಲಯದ ನೌಕರರ ಸಂಘ ಇಲ್ಲಿನ ಕೇಂದ್ರ ಕ್ರೀಡಾಂಗಣದಲ್ಲಿ ಸಮಾರಂಭ ಹಮ್ಮಿಕೊಂಡಿತ್ತು. ಮುಖ್ಯಮಂತ್ರಿ ಪಿಣರಾಯಿ ಅವರು ಈ ವೇಳೆ ಕೇಕ್ ಕತ್ತರಿಸಿದರು.

‘ಪಿಣರಾಯಿ ವಿಜಯನ್ ಅವರು ಸಚಿವಾಲಯದ ನೌಕರರನ್ನು ಅತ್ಯಂತ ಗೌರವಯುತವಾಗಿ ನೋಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರು ರಾಜ್ಯವನ್ನಾಳಿದ ಹಿಂದಿನ ಮುಖ್ಯಮಂತ್ರಿಗಳಿಗಿಂತ ಮುಂದಿದ್ದಾರೆ’ ಎಂದು ನೌಕರರ ಸಂಘದ ಅಧ್ಯಕ್ಷ ಪಿ. ಹನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.