ಬೆಂಗಳೂರು: 1980ರ ದಶಕದಿಂದ ಭಾರತದ ಜಾಹೀರಾತು ಲೋಕಕ್ಕೆ ವಿಶೇಷ ಮೆರಗು ತುಂಬಿದ್ದ ಪದ್ಮಶ್ರೀ ಪಿಯೂಷ್ ಪಾಂಡೆ ಅವರು ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಾಂಡೆ ಅವರು ನವದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ರಾಜಸ್ಥಾನದ ಜೈಪುರ ಮೂಲದವರಾಗಿದ್ದ ಪಾಂಡೆ ಅವರು, ಫೇವಿಕೊಲ್, ಡೈರಿ ಮಿಲ್ಕ್, ಕ್ಯಾಡ್ಬರಿ, ಏಷಿಯನ್ ಪೇಂಟ್ಸ್, ವೋಡಾಪೋನ್ ZooZoos ಸೇರಿದಂತೆ ಮುಂತಾದ ಜನಪ್ರಿಯ ಟಿವಿ ಜಾಹೀರಾತುಗಳ ಹಿಂದಿನ ರೂವಾರಿಯಾಗಿದ್ದರು.

ಭಾರತದ ಜಾಹೀರಾತು ಕ್ಷೇತ್ರ, ಸಾರ್ವಜನಿಕ ಸಂಪರ್ಕ (ಪಿಆರ್) ಕ್ಷೇತ್ರದ ಮೇರು ಪ್ರತಿಭೆ ಎಂದು ಅವರನ್ನು ಗುರುತಿಸಲಾಗಿತ್ತು. ಸದ್ಯ ದೇಶದ ದೊಡ್ಡ ಜಾಹೀರಾತು ಹಾಗೂ ಪಿಆರ್ ಏಜೆನ್ಸಿಯಾಗಿರುವ Ogilvy India ಕಂಪನಿಯಲ್ಲಿ 1982ರಿಂದ ಕೆಲಸ ಮಾಡಿ ಅದರ ಅಧ್ಯಕ್ಷರಾಗಿ ಇತ್ತೀಚೆಗೆ ಗೌರವ ಸಲಹೆಗಾರರಾಗಿ ನಿವೃತ್ತಿಯಾಗಿದ್ದರು.

80ರ ದಶಕದಲ್ಲಿ ಜಾಹೀರಾತು ಲೋಕದಲ್ಲಿ ಇಂಗ್ಲಿಷ್ ಹಾಗೂ ವಿದೇಶಿ ಸಿದ್ದಸೂತ್ರದ ಪ್ರಭಾವ ಗಟ್ಟಿಯಾಗಿತ್ತು. ಪಾಂಡೆ ಅವರು ಈ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಆ ಸೂತ್ರಗಳನ್ನು ಬದಿಗೆ ಸರಿಸಿ, ಹಿಂದಿ ಹಾಗೂ ಇತರ ಪ್ರಾದೇಶಿಕ ಭಾಷೆಗಳಲ್ಲಿ ಟಿ.ವಿ ಜಾಹೀರಾತುಗಳನ್ನು ನಿರ್ಮಿಸಿ ಉದ್ಯಮಗಳ, ಬ್ರ್ಯಾಂಡ್ಗಳ ಬೆಳವಣಿಗೆಗೆ ಕಾರಣವಾದರು.

ಜಾಹೀರಾತು ಮೂಲ ಧ್ಯೇಯಕ್ಕೆ ದಕ್ಕೆಯಾಗದಂತೆ ಹೇಳುವುದನ್ನು ನವೀರಾಗಿ ಕಚಗುಳಿ ಇಟ್ಟಂತೆ ಹೇಳುವ ಅವರ ಜಾಹೀರಾತು ಶೈಲಿಗಳು ಭಾರತೀಯರಿಗೆ ಇಷ್ಟವಾಗಿದ್ದವು.

2019ರಲ್ಲಿ ಬಿಜೆಪಿಯ ‘ಅಬ್ ಕಿ ಬಾರ್ ಮೋದಿ ಸರ್ಕಾರ್’ ಎಂಬ ‘ಪಿಆರ್ ಕ್ಯಾಂಪೇನ್’ ಸೃಷ್ಟಿಸಿದ್ದು ಇವರೇ. ಪಿಯೂಷ್ ಪಾಂಡೆ ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.