ಕೊವ್ವಾದ ರಾಷ್ಟ್ರೀಯ ಸೈಕ್ಲಿಂಗ್ ಕ್ರೀಡಾಂಗಣದಲ್ಲಿ ಶುಕ್ರವಾರ ಭಾರತೀಯ ಸಮುದಾಯದತ್ತ ಕೈ ಬೀಸಿದ ಪ್ರಧಾನಿ ನರೇಂದ್ರ ಮೋದಿ–
ಪಿಟಿಐ ಚಿತ್ರ
ಟ್ರಿನಿಡಾಡ್–ಟೊಬಾಗೋ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಲ್ಲಿನ ಪ್ರಧಾನಿ ಕಮಲಾ ಪೆಸ್ರಾದ್ ಬಿಸ್ಸೆಸ್ಸರ್ ಅವರಿಗೆ ಮಹಾಕುಂಭಮೇಳದ ಗಂಗಾಜಲ ರಾಮಮಂದಿರ ಬೆಳ್ಳಿ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು–ಪಿಟಿಐ ಚಿತ್ರ
ಸೊಹರಿ ಎಲೆಯಲ್ಲಿ ಉಪಾಹಾರ ಗಂಗಾಜಲ ಉಡುಗೊರೆ
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಲ್ಲಿನ ಪ್ರಧಾನಿ ಕಮಲಾ ಕಮಲಾ ಪೆಸ್ರಾದ್ ಬಿಸ್ಸೆಸ್ಸರ್ ಅವರು ಪೋರ್ಟ್ ಆಫ್ ಸ್ಪೇನ್‌ನಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಸೊಹರಿ ಎಲೆಯಲ್ಲಿ ಉಪಾಹಾರ ಸೇವಿಸಿದರು. ‘ಇದು ಸಾಂಸ್ಕೃತಿಕವಾಗಿ ಮಹತ್ವವಾಗಿದ್ದು ಭಾರತೀಯರಿಗೆ ಇಷ್ಟವಾಗುತ್ತದೆ. ಯಾವುದೇ ವಿಶೇಷ ಸಂದರ್ಭದಲ್ಲಿ ಎಲೆಯಲ್ಲಿ ಆಹಾರ ಸೇವಿಸಲಾಗುತ್ತದೆ’ ಎಂದು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಭೋಜ್‌ಪುರಿ ಶೈಲಿಯಲ್ಲಿ ಕಲಾವಿದರು ಸ್ವಾಗತಿಸಿದರು. ಈ ವೇಳೆ ಪ್ರಧಾನಿ ಕಮಲಾ ಅವರಿಗೆ ಮಹಾಕುಂಭಮೇಳದ ಗಂಗಾಜಲ ಹಾಗೂ ಅಯೋಧ್ಯೆ ರಾಮಮಂದಿರದ ಬೆಳ್ಳಿ ಪ್ರತಿಕೃತಿಯನ್ನು ಮೋದಿ ಅವರು ಉಡುಗೊರೆ ನೀಡಿದರು.