ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆಗೆ ಮನಮೋಹನ್‌ ಸಿಂಗ್‌ ಕೊಡುಗೆ ಶ್ಲಾಘಿಸಿದ ಪ್ರಧಾನಿ ಮೋದಿ

Published 8 ಫೆಬ್ರುವರಿ 2024, 6:50 IST
Last Updated 8 ಫೆಬ್ರುವರಿ 2024, 6:50 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ ಸದಸ್ಯರಿಗೆ ವಿದಾಯ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸದನಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.

ಪ್ರಜಾಪ್ರಭುತ್ವವನ್ನು ಬಲಪಡಿಸಲು ಮನಮೋಹನ್ ಸಿಂಗ್ ಅವರು ಗಾಲಿಕುರ್ಚಿಯಲ್ಲಿ ರಾಜ್ಯಸಭೆಯಲ್ಲಿ ಮತ ಚಲಾಯಿಸಲು ಬಂದರು. ಒಬ್ಬ ಸದಸ್ಯನು ತನ್ನ ಕರ್ತವ್ಯಗಳ ಬಗ್ಗೆ ಜವಾಬ್ದಾರಿಯಾಗಿದ್ದಾನೆ ಎನ್ನುವುದಕ್ಕೆ ಇದು ಒಂದು ಉದಾಹರಣೆಯಾಗಿದೆ ಎಂದರು.

ನಿವೃತ್ತರಾಗುತ್ತಿರುವ ಎಲ್ಲ ಸದಸ್ಯರಿಗೆ ಶುಭ ಹಾರೈಸಿದ ಅವರು, ತಮ್ಮ ಅನುಭವದಿಂದ ಹೊಸ ತಲೆಮಾರುಗಳು ಪ್ರಯೋಜನ ಪಡೆಯಲಿ ಎಂದು ಹಾರೈಸಿದರು.

ರಾಜ್ಯಸಭೆಯ 68 ಸದಸ್ಯರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ ನಂತರ ಫೆಬ್ರುವರಿ ಮತ್ತು ಮೇ ನಡುವೆ ನಿವೃತ್ತರಾಗುತ್ತಿದ್ದಾರೆ.

ಕಪ್ಪು ಪತ್ರದ ಬಗ್ಗೆ ಮೋದಿ ವ್ಯಂಗ್ಯ

ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ ಅವರು, ತಮ್ಮ ಸರ್ಕಾರದ ವಿರುದ್ಧ ‘ಕಪ್ಪು ಪತ್ರ’ ಹೊರತಂದಿದ್ದಕ್ಕಾಗಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದಗಳು. ಒಳ್ಳೆಯ ಕೆಲಸದ ಮಧ್ಯೆ ಇದೊಂದು ‘ಕಾಲಾ ಟೀಕಾ’ (ಕೆಟ್ಟ ಕಣ್ಣುಗಳನ್ನು ದೂರ ಮಾಡುವುದು) ಆಗಿದೆ ಎಂದು ಹೇಳಿದರು.

ಪ್ರತಿಭಟನೆಯ ಸಂಕೇತವಾಗಿ ಸದನದಲ್ಲಿ ವಿರೋಧ ಪಕ್ಷದ ಸಂಸದರು ಧರಿಸಿದ್ದ ಕಪ್ಪು ನಿಲುವಂಗಿಯನ್ನು ಉಲ್ಲೇಖಿಸಿದ ಪ್ರಧಾನಿ, ‘ಕೆಲವು ಸದಸ್ಯರು ಕಪ್ಪು ಬಟ್ಟೆಯಲ್ಲಿ ಬಂದಾಗ ನಾವು ರಾಜ್ಯಸಭೆಯಲ್ಲಿ ಫ್ಯಾಷನ್ ಪರೇಡ್ ಅನ್ನು ಸಹ ನೋಡಿದ್ದೇವೆ’ ಎಂದರು.

ಕಾಂಗ್ರೆಸ್‌ನಿಂದ ಕಪ್ಪು ಪತ್ರ ಬಿಡುಗಡೆ

2014ರಿಂದ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿರುವ ‘ಕಪ್ಪು ಪತ್ರ’ವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಬಿಡುಗಡೆ ಮಾಡಿದ್ದಾರೆ

’10 ವರ್ಷಗಳ ಅನ್ಯಾಯ ಕಾಲ’ ಎಂದು ಈ ‘ಕಪ್ಪು ಪತ್ರ’ಕ್ಕೆ ಹೆಸರಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT