ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಸಿಬಿಐ ತನಿಖೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಬರೆದ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ್ದಾರೆ.
ಈ ಕುರಿತು ಸುಬ್ರಮಣಿಯನ್ ಸ್ವಾಮಿ ಅವರಿಗೆ ಪತ್ರ ಬರೆದಿರುವ ಮೋದಿ ‘ ಜುಲೈ 15ರಂದು ನೀವು ಬರೆದ ಪತ್ರ ನನ್ನ ಕೈ ಸೇರಿದೆ,’ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.
Dr Subramanian @Swamy39 had written letter dr 15th July 2020 to @narendramodi@PMOIndia on the mysterious death of Actor Sushant Singh Rajput & asked for CBI investigation, Now Namo by letter dt 20th July has acknowledged the letter pic.twitter.com/1updoiWQFq
ಸುಶಾಂತ್ ಸಿಂಗ್ ರಜಪೂತ್ ಅವರ ಅಸ್ವಾಭಾವಿಕ ಸಾವಿನ ಬಗ್ಗೆ ಸಿಬಿಐ ತನಿಖೆ ಬಯಸುವವರು ಪ್ರಧಾನಿ ಮೋದಿ ಅವರಿಗೆ ನನ್ನಂತೆಯೇ ಪತ್ರ ಬರೆಯಬೇಕು ಎಂದು ಅವರ ಕ್ಷೇತ್ರದ ಸಂಸದರನ್ನು ಒತ್ತಾಯಿಸಬೇಕು ಎಂದು ಟ್ವೀಟ್ ಮಾಡಿದ್ದರು.
All those who want CBI inquiry into the circumstances of SSR’s unnatural death should ask their constituency MPs to write, like me, to PM asking for a CBI inquiry.
ಬಿಹಾರ ಮೂಲದ ಸುಶಾಂತ್ ಸಿಂಗ್ ರಜಪೂತ್ ಅವರು ಜೂನ್ 14ರಂದು ಮುಂಬೈನ್ ತಮ್ಮ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಸಾವು ಅಸಹಜ ಎಂಬ ವಾದಗಳು ಅಂದಿನಿಂದಲೂ ಕೇಳಿ ಬರುತ್ತಿವೆ.
ಇಷ್ಟೇ ಅಲ್ಲದೆ, ಸುಶಾಂತ್ ಆತ್ಮಹತ್ಯೆ ನಂತರ ಬಾಲಿವುಡ್‌ನಲ್ಲಿ ಸ್ವಜನ ಪಕ್ಷಪಾತದ ಕುರಿತು ಭಾರಿ ಚರ್ಚೆಗಳಾಗಿವೆ.
ಈ ಮಧ್ಯೆ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೇ ಸಿನಿಮಾ ದಿಲ್ ಬೇಚಾರ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಉತ್ತಮ ಸ್ಪಂದನೆ ದೊರೆತಿದೆ.