ನವದೆಹಲಿ: ನೊಬೆಲ್ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್ ಅವರ 160ನೇ ಜನ್ಮ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗೌರವ ನಮನ ಸಲ್ಲಿಸಿದರು.

ಟ್ಯಾಗೋರ್ ಅವರು ಮೇ 7ರಂದು ಜನಿಸಿದರು. ಆದರೆ ಅವರ ಜನ್ಮಸ್ಥಳ ಪಶ್ಚಿಮ ಬಂಗಾಳದ ಸಾಂಪ್ರಾದಾಯಿಕ ಕ್ಯಾಲೆಂಡರ್‌ಗೆ ಅನುಗುಣವಾಗಿ ಅವರ ಜನ್ಮದಿನವನ್ನು ಈ ವರ್ಷ ಭಾನುವಾರ ಆಚರಿಸಲಾಗುತ್ತಿದೆ.

‘ಈ ಶುಭ ಸಂದರ್ಭದಲ್ಲಿ ನಾನು ರವೀಂದ್ರನಾಥ ಟ್ಯಾಗೋರ್ ಅವರಿಗೆ ತಲೆ ಬಾಗುತ್ತೇನೆ. ಟ್ಯಾಗೋರ್ ಅವರ ಆದರ್ಶಗಳು ನಮಗೆ ಅವರ ಕನಸಿನ ಭಾರತವನ್ನು ನಿರ್ಮಿಸಲು ಶಕ್ತಿ ಮತ್ತು ಸ್ಪೂರ್ತಿಯನ್ನು ನೀಡಲಿ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಇದೇ ದಿನ ಜನಿಸಿದ ಸ್ವಾತಂತ್ರ್ಯ ಹೋರಾಟಗಾರ ಗೋಪಾಲ್ ಕೃಷ್ಣ ಗೋಖಲೆ ಮತ್ತು ರಾಜ ಮಹಾರಾಣಾ ಪ್ರತಾಪ್ ಅವರಿಗೂ ಪ್ರಧಾನಿ ಮೋದಿ ಅವರು ಗೌರವ ಸಲ್ಲಿಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, ‘ಗೋಖಲೆ ಅವರು ತಮ್ಮ ಜೀವನವನ್ನು ದೇಶದ ಸೇವೆಗಾಗಿ ಸಮರ್ಪಿಸಿದರು. ಇದು ದೇಶದ ಜನತೆಗೆ ಸದಾ ಸ್ಪೂರ್ತಿ ನೀಡಲಿದೆ’ ಎಂದು ಹೇಳಿದ್ದಾರೆ.

‘ಮಹಾರಾಣಾ ಪ್ರತಾಪ್ ಅವರು ತಮ್ಮ ಮೌಲ್ಯ, ಧೈರ್ಯ ಮತ್ತು ಯುದ್ಧ ಕೌಶಲಗಳ ಮೂಲಕ ಭಾರತಕ್ಕೆ ಕೀರ್ತಿ ತಂದರು. ಮಾತೃಭೂಮಿಗಾಗಿ ಅವರ ಮಾಡಿದ ತ್ಯಾಗವು ಸದಾ ಸ್ಮರಣೀಯ’ ಎಂದು ಮೋದಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.