ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Wayanad Landslide | ಪ್ರಧಾನಿ ಮೋದಿ ಭೇಟಿ, ಪರಿಶೀಲನೆ: ಸಂತ್ರಸ್ತರಿಗೆ ಸಾಂತ್ವನ

Published 10 ಆಗಸ್ಟ್ 2024, 10:57 IST
Last Updated 10 ಆಗಸ್ಟ್ 2024, 10:57 IST
ಅಕ್ಷರ ಗಾತ್ರ

ವಯನಾಡ್: ಕೇರಳದ ವಯನಾಡ್ ಜಿಲ್ಲೆಯ ಭೂಕುಸಿತ ಪೀಡಿತ ಪ್ರದೇಶಗಳಿಗೆ ಇಂದು (ಶನಿವಾರ) ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪರಿಶೀಲನೆ ನಡೆಸಿದರು.

ಕಣ್ಣೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ದುರಂತ ಸ್ಥಳಕ್ಕೆ ಭೇಟಿ ಕೊಟ್ಟರು. ವಾಯುಸೇನೆಯ ಹೆಲಿಕಾಪ್ಟರ್‌ನಲ್ಲಿ ಪ್ರಧಾನಿ ಮೋದಿ ಅವರು, ಚೂರಲ್‌ಮಲ, ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.

ಬಳಿಕ ಚೂರಲ್‌ಮಲದಲ್ಲಿ ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕಾಲ್ನಡಿಯ ಮೂಲಕ ಭೇಟಿ ನೀಡಿದರು.

ಮಧ್ಯಾಹ್ನ 2.30ರ ಸುಮಾರಿಗೆ ಮೇಪ್ಪಾಡಿಯ ನಿರಾಶ್ರಿತ ಶಿಬಿರವೊಂದಕ್ಕೆ ಭೇಟಿ ನೀಡಿದ ಮೋದಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಅಲ್ಲಿ ಸುಮಾರು ಅರ್ಧ ತಾಸು ಮೋದಿ ಕಳೆದರು. ಈ ವೇಳೆ ದುಃಖತಪ್ತರಾದ ಸಂತ್ರಸ್ತರನ್ನು ಸಂತೈಸಿದರು.

ರಕ್ಷಣಾ ಕಾರ್ಯಾಚರಣೆ ವೇಳೆ ಸೇನೆಯು 190 ಮೀಟರ್ ಉದ್ದದ ಬೈಲಿ ಸೇತುವೆಯನ್ನು ನಿರ್ಮಿಸಿತ್ತು. ಈ ಸೇತುವೆಯಲ್ಲಿ ಹಾದು ಹೋಗುವ ಮೂಲಕ ಪ್ರಧಾನಿ ಪರಿಶೀಲನೆ ನಡೆಸಿದರು. ರಕ್ಷಣಾ ಕಾರ್ಯಾಚರಣೆಯ ಅಧಿಕಾರಿಗಳೊಂದಿಗೆ ಪ್ರಧಾನಿ ಮಾತುಕತೆ ನಡೆಸಿದರು.

ಪ್ರಧಾನಿ ಅವರೊಂದಿಗೆ ಕೇರಳದ ಗವರ್ನರ್ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವ ಸುರೇಶ್ ಗೋಪಿ ಜೊತೆಗಿದ್ದರು.

ಜುಲೈ 30ರಂದು ಸಂಭವಿಸಿದ್ದ ಭೂಕುಸಿತದಲ್ಲಿ 226 ಮಂದಿ ಮೃತಪಟ್ಟಿದ್ದು, 130ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಭೂಕುಸಿತ ಪೀಡಿತ ಪ್ರದೇಶಗಳಿಗೆ ಪ್ರಧಾನಿ ವಿಶೇಷ ಪರಿಹಾರ ನಿಧಿ ಘೋಷಿಸುವ ಸಾಧ್ಯತೆಯಿದೆ.

ಸಂತ್ರಸ್ತರನ್ನು ಸಂತೈಸಿದ ಪ್ರಧಾನಿ ಮೋದಿ

ಸಂತ್ರಸ್ತರನ್ನು ಸಂತೈಸಿದ ಪ್ರಧಾನಿ ಮೋದಿ

(ಪಿಟಿಐ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT