ನವದೆಹಲಿ: ‘ವಿಕಸಿತ ಭಾರತ–2047’ಕ್ಕೆ ಸಂಬಂಧಿಸಿದ ಕಾರ್ಯಸೂಚಿ ಸಿದ್ಧಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟದ ಸದಸ್ಯರ ಜೊತೆ ಭಾನುವಾರ ಇಡೀ ದಿನ ಸಭೆ ನಡೆಸಿದರು. ಮುಂದಿನ ಐದು ವರ್ಷಗಳಿಗೆ ಸಂಬಂಧಿಸಿದ ವಿಸ್ತೃತ ಕ್ರಿಯಾಯೋಜನೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.

ಮೇ ತಿಂಗಳಲ್ಲಿ ಹೊಸ ಸರ್ಕಾರ ರಚನೆ ಆದ ನಂತರದಲ್ಲಿ ತಕ್ಷಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ‘100 ದಿನಗಳ ಕಾರ್ಯಸೂಚಿ’ ಕುರಿತು ಕೂಡ ಚರ್ಚೆ ನಡೆಯಿತು ಎಂದು ಸರ್ಕಾರದ ಮೂಲಗಳು ಹೇಳಿವೆ.

‘ವಿಕಸಿತ ಭಾರತ’ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರಲು ಅಗತ್ಯವಿರುವ ಯೋಜನೆಯನ್ನು ಸಿದ್ಧಪಡಿಸಲು ಎರಡು ವರ್ಷಗಳಿಗೂ ಹೆಚ್ಚಿನ ಅವಧಿ ತೆಗೆದುಕೊಳ್ಳಲಾಗಿದೆ. ಎಲ್ಲ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಅಕಾಡೆಮಿಕ್ ವಲಯದ ವಿದ್ವಾಂಸರು, ಉದ್ಯಮಗಳ ಪ್ರಮುಖರು, ನಾಗರಿಕ ಸಮಾಜದ ಪ್ರತಿನಿಧಿಗಳು, ವಿಜ್ಞಾನಿಗಳು, ಯುವಕರಿಂದ ಇದಕ್ಕೆ ಸಲಹೆಗಳನ್ನು ಪಡೆಯಲಾಗಿದೆ.

‘2,700ಕ್ಕೂ ಹೆಚ್ಚಿನ ಸಭೆಗಳು, ಕಾರ್ಯಾಗಾರಗಳು, ವಿಚಾರಗೋಷ್ಠಿಗಳನ್ನು ಹಲವು ಹಂತಗಳಲ್ಲಿ ನಡೆಸಲಾಗಿದೆ. 20 ಲಕ್ಷಕ್ಕೂ ಹೆಚ್ಚಿನ ಯುವಕರಿಂದ ಸಲಹೆಗಳನ್ನು ಪಡೆಯಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಲೋಕಸಭಾ ಚುನಾವಣೆಯ ಘೋಷಣೆಗೂ ಮೊದಲು ನಡೆದ ಇಂತಹ ಕಡೆಯ ಸಭೆ ಇದಾಗಬಹುದು ಎನ್ನಲಾಗಿದೆ. ಈ ಸಭೆಯಲ್ಲಿ ಹಲವು ಸಚಿವಾಲಯಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.