ನವದೆಹಲಿ: ದ್ವಿಪಕ್ಷೀಯ ವ್ಯಾಪಾರ ಮತ್ತು ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರದಿಂದ ಎರಡು ದಿನ ಇಸ್ರೇಲ್ಗೆ ಭೇಟಿ ನೀಡಲಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧ ಹದಗೆಡುತ್ತಿರುವುದು ಸೇರಿದಂತೆ ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ನಡುವೆ ಮೋದಿ ಇಸ್ರೇಲ್ ಪ್ರವಾಸ ಕೈಗೊಂಡಿದ್ದಾರೆ.

ಇಸ್ರೇಲ್ ಸಂಸತ್ತಿನಲ್ಲಿ ಮಾತನಾಡಲಿರುವ ಮೋದಿ, ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತುಕತೆಯನ್ನು ನಡೆಸಲಿದ್ದಾರೆ.

ಎರಡೂ ದೇಶದ ಪ್ರಧಾನಿಗಳ ನಿಯೋಗ ಮಟ್ಟದಲ್ಲಿ ಗುರುವಾರ ನಡೆಯಲಿರುವ ಮಾತುಕತೆಯ ಸಂದರ್ಭದಲ್ಲಿ, ಉಭಯ ದೇಶಗಳ ನಡುವಿನ ರಕ್ಷಣೆ ಹಾಗೂ ಭದ್ರತಾ ಸಹಕಾರವನ್ನು ಹೆಚ್ಚಿಸುವುದು ಪ್ರಮುಖ ವಿಷಯವಾಗಿರಲಿದೆ ಎಂಬುದು ತಿಳಿದುಬಂದಿದೆ.

ವಿಜ್ಞಾನ–ತಂತ್ರಜ್ಞಾನ, ನಾವೀನ್ಯ, ವ್ಯಾಪಾರ– ಹೂಡಿಕೆ, ಕೃಷಿ–ನೀರಾವರಿ ಕ್ಷೇತ್ರದಲ್ಲಿ ಭಾರತ–ಇಸ್ರೇಲ್ ನಡುವಿನ ಪರಸ್ಪರ ಸಹಕಾರ ಕುರಿತಂತೆ ಚರ್ಚಿಸಲಿರುವ ಉಭಯ ದೇಶಗಳ ಪ್ರಧಾನಿ, ತಮ್ಮ ಮಾತುಕತೆಯಲ್ಲಿ ಗಾಜಾ ಸೇರಿದಂತೆ ಮಧ್ಯಪ್ರಾಚ್ಯದ ಉದ್ವಿಗ್ನತೆಯ ಬಗ್ಗೆಯೂ ಚರ್ಚಿಸುವ ಸಾಧ್ಯತೆಯಿದೆ.

ನೆತನ್ಯಾಹು ಅವರು ಬುಧವಾರ ರಾತ್ರಿ ಮೋದಿ ಅವರಿಗೆ ಔತಣ ನೀಡಲಿದ್ದಾರೆ. 2017ರ ಜುಲೈನಲ್ಲಿ ಮೊದಲ ಬಾರಿಗೆ ಇಸ್ರೇಲ್ಗೆ ಭೇಟಿ ನೀಡಿದ್ದ ಮೋದಿ ಅವರು ಒಂಬತ್ತು ವರ್ಷಗಳ ಬಳಿಕ ಎರಡನೇ ಬಾರಿಗೆ ಇದೀಗ ಭೇಟಿ ನೀಡುತ್ತಿದ್ದಾರೆ. 2018ರ ಜನವರಿಯಲ್ಲಿ ಬೆಂಜಮಿನ್ ಅವರು ಭಾರತಕ್ಕೆ ಭೇಟಿ ಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.