ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

‘ರಾಷ್ಟ್ರ ಮೊದಲು’ ನನ್ನ ಗುರಿ, ಆದ್ಯತೆ: ಪ್ರಧಾನಿ ನರೇಂದ್ರ ಮೋದಿ

Published 10 ಜೂನ್ 2024, 16:46 IST
Last Updated 10 ಜೂನ್ 2024, 16:46 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಮಂತ್ರಿಗಳ ಕಾರ್ಯಾಲಯ (ಪಿಎಂಒ) ‘ವೇಗವರ್ಧಕ ಏಜೆಂಟ್’ ಆಗಿ ವ್ಯವಸ್ಥೆಗೆ ಶಕ್ತಿ ನೀಡುತ್ತಿದೆ. 10 ವರ್ಷದ ಹಿಂದೆ ಇದು ಅಧಿಕಾರದ ಕೇಂದ್ರವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪಿಎಂಒ ಕಚೇರಿಯ ಸಿಬ್ಬಂದಿ ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು, ನನ್ನ ಏಕೈಕ ಆದ್ಯತೆ, ಗುರಿ ರಾಷ್ಟ್ರಮೊದಲು ಎಂಬುದೇ ಆಗಿದೆ. ಸಿಬ್ಬಂದಿಯಿಂದಲೂ ನಾನು ಅದನ್ನೇ ನಿರೀಕ್ಷಿಸುತ್ತೇನೆ ಎಂದು ಹೇಳಿದರು.

‘ನನ್ನ ಪ್ರತಿ ಕ್ಷಣವೂ ದೇಶಕ್ಕಾಗಿಯೇ ಇದೆ. ಈ ಗುರಿ ಸಾಧನೆಗೆ ಹಾಗೂ ದೇಶವನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸಲು ದಿನದ 24 ಗಂಟೆ ಕೆಲಸ ಮಾಡುವ ಭರವಸೆಯನ್ನು ನಾನು ನೀಡುತ್ತೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT