ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿ ಎಂದರೆ ಪ್ರತಿಯೊಂದು ಭರವಸೆಯು ಈಡೇರುತ್ತವೆ ಎಂದರ್ಥ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ದೆಹಲಿ ಸರ್ಕಾರ ಮೊದಲ ಸಚಿವ ಸಂಪುಟ ಸಭೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಘೋಷಣೆಯನ್ನು ನಡ್ಡಾ ಅಭಿನಂದಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಹಿಂದಿನ ಎಎಪಿ ಸರ್ಕಾರವು ತನ್ನ ಸಂಕುಚಿತ ಮತ್ತು ಸ್ವಾರ್ಥ ರಾಜಕೀಯದಿಂದಾಗಿ, 10 ವರ್ಷಗಳ ಕಾಲ ದೆಹಲಿಯ ಜನರನ್ನು ಈ ಸಾರ್ವಜನಿಕ ಕಲ್ಯಾಣ ಯೋಜನೆಯಿಂದ ದುರುದ್ದೇಶಪೂರ್ವಕವಾಗಿ ವಂಚಿತಗೊಳಿಸಿತು. ಇದರಿಂದಾಗಿ ದೆಹಲಿಯ ಲಕ್ಷಾಂತರ ನಾಗರಿಕರು ಕಠಿಣ ಸಂದರ್ಭಗಳಲ್ಲಿ ಉತ್ತಮ ಚಿಕಿತ್ಸೆಯಿಂದ ವಂಚಿತರಾದರು’ ಎಂದು ಆರೋಪಿಸಿದ್ದಾರೆ.

ಪ್ರಧಾನಿ ಮೋದಿ ಅವರ ಗ್ಯಾರಂಟಿ ಎಂದರೆ ಪ್ರತಿಯೊಂದು ಭರವಸೆಯು ಈಡೇರುತ್ತವೆ ಎಂದರ್ಥ. ಮೋದಿ ಅವರ ಮಾರ್ಗದರ್ಶನದಲ್ಲಿ ದೆಹಲಿಯ ಬಿಜೆಪಿ ಸರ್ಕಾರ ಜನರ ಭಾವನೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳ ಗುರಿಯನ್ನು ಸಾಧಿಸಲು ಬದ್ಧವಾಗಿದೆ ಎಂಬುದಕ್ಕೆ ಮೊದಲ ಸಂಪುಟ ಸಭೆಯ ನಿರ್ಧಾರ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.