ಬೆಂಗಳೂರು: ಬೆಂಗಳೂರಿನ ಪ್ರತೀತಿ ಬೋರ್ದೊಲಾಯಿ ಮತ್ತು ಆದ್ಯಾ ಗೌಡ ಅವರು ಜಾರ್ಜಿಯಾದ ಬಟುಮಿ ನಗರದಲ್ಲಿ ನಡೆದ ಫಿಡೆ ವಿಶ್ವ ಕೆಡೆಟ್ಸ್ ಕಪ್ (12 ವರ್ಷದೊಳಗಿನವರ) ಚೆಸ್ ಚಾಂಪಿಯನ್ಷಿಪ್ ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಶಿಷ್ಯ ಬೆಮೆಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯಾಗಿರುವ ಪ್ರತೀತಿ ಮತ್ತು ಕೇಂಬ್ರಿಜ್ ಇಂಟರ್ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿನಿ ಆದ್ಯಾ ಅವರು ತಮ್ಮ ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಪಡೆದರು. ಪ್ರತೀತಿ ‘ಬಿ’ ಗುಂಪಿನಲ್ಲಿ ಅಜೇಯ ಸಾಧನೆ ತೋರಿ 7 ಸುತ್ತುಗಳಿಂದ 6.5 ಪಾಯಿಂಟ್ಸ್ ಸಂಗ್ರಹಿಸಿದರೆ, ಆದ್ಯಾ ‘ಎ’ ಗುಂಪಿನಲ್ಲಿ 7 ಸುತ್ತುಗಳಿಂದ 6 ಪಾಯಿಂಟ್ಸ್ ಕಲೆಹಾಕಿದಳು. ಪ್ರಶಸ್ತಿಗಾಗಿ ಇವರಿಬ್ಬರ ನಡುವೆ ನಡೆದ ಅಂತಿಮ ಮುಖಾಮುಖಿಯಲ್ಲಿ ಪ್ರತೀತಿ ಎರಡೂ ಕ್ಲಾಸಿಕಲ್ ಪಂದ್ಯಗಳನ್ನು ಗೆದ್ದು ಚಾಂಪಿಯನ್ ಕಿರೀಟ ಧರಿಸಿದಳು.

ಇವರಿಬ್ಬರು ಹೋದ ವರ್ಷ ಹೈದರಾಬಾದಿನಲ್ಲಿ ನಡೆದ 11 ವರ್ಷದೊಳಗಿನವರ ರಾಷ್ಟ್ರೀಯ ಚೆಸ್ ಚಾಂಪಿಯನ್ಷಿಪ್ನಲ್ಲಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿ, ವಿಶ್ವ ಕೆಡೆಟ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.