ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುಣೆ ಪೋಶೆ ಕಾರು ಅಪಘಾತ ಪ್ರಕರಣ: ಪ್ರಬಂಧ ಬರೆದು ಸಲ್ಲಿಸಿದ ಬಾಲಕ

Published 5 ಜುಲೈ 2024, 12:46 IST
Last Updated 5 ಜುಲೈ 2024, 12:46 IST
ಅಕ್ಷರ ಗಾತ್ರ

ಪುಣೆ: ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಜಾಮೀನು ನೀಡುವ ವೇಳೆ ಬಾಲನ್ಯಾಯಮಂಡಳಿ ವಿಧಿಸಿದ್ದ ಷರತ್ತನ್ನು ಅಪಘಾತ ಎಸಗಿದ್ದ ಬಾಲಕ ಪೂರ್ಣಗೊಳಿಸಿದ್ದು, ರಸ್ತೆ ಸುರಕ್ಷತೆ ಬಗ್ಗೆ 300 ಪದಗಳ ಪ್ರಬಂಧವನ್ನು ಬರೆದು ಮಂಡಳಿಗೆ ಸಲ್ಲಿಸಿದ್ದಾನೆ.

ಪ್ರಬಂಧವನ್ನು ಬಾಲಕನು ಬುಧವಾರ ನ್ಯಾಯಮಂಡಳಿಗೆ ಸಲ್ಲಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 19ರಂದು ಕಲ್ಯಾಣಿ ನಗರದಲ್ಲಿ ಪಾನಮತ್ತ ಬಾಲಕನು ಚಲಾಯಿಸುತ್ತಿದ್ದ ಪೋಶೆ ಕಾರು ಡಿಕ್ಕಿಹೊಡೆದು ಇಬ್ಬರು ಟೆಕಿಗಳು ಮೃತಪಟ್ಟಿದ್ದರು.

ಪ್ರಕರಣದಲ್ಲಿ ಬಾಲಕನಿಗೆ ಜಾಮೀನು ನೀಡಿದ್ದ ಬಾಲನ್ಯಾಯಮಂಡಳಿಯು 15 ದಿನಗಳ ಒಳಗಾಗಿ 300 ಪದಗಳ ಪ್ರಬಂಧ ಬರೆದು ಸಲ್ಲಿಸುವಂತೆ ಸೂಚಿಸಿತ್ತು. ಬಾಲಕನಿಗೆ ನೀಡಿರುವ ಕಠಿಣವಲ್ಲದ ಶಿಕ್ಷೆಯ ಬಗ್ಗೆ ರಾಷ್ಟ್ರವ್ಯಾಪಿ ಟೀಕೆ ವ್ಯಕ್ತವಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT