‘ಆಡಳಿತಾರೂಢ ಎನ್‌ಡಿಎ ಸರ್ಕಾರದ ಕಮಿಷನ್ ದಂಧೆ, ಸುಲಿಗೆಯನ್ನು ಈ ಘಟನೆಯು ಸಾಬೀತುಪಡಿಸಿದೆ. ಮುಖ್ಯಮಂತ್ರಿ ಪರಿಶೀಲನೆ ನಡೆಸಿದ ಕೆಲವೇ ದಿನಗಳಲ್ಲಿ ಜಮುಈಯ ಬರ್ನಾರ್ ನದಿಗೆ ನಿರ್ಮಿಸುತ್ತಿದ್ದ ಸೇತುವೆಯೂ ವಾರದ ಹಿಂದಷ್ಟೇ ಕುಸಿದಿದೆ. ಈಚೆಗೆ ರಾಜ್ಯದಲ್ಲಿ ಸೇತುವೆಗಳು ನಿರಂತರವಾಗಿ ಕುಸಿಯುತ್ತಿರುವುದಕ್ಕೆ ಪ್ರಧಾನಿ ಮೋದಿ ಅವರು ಜನರಿಗೆ ಏನು ಹೇಳುತ್ತಾರೆ’ ಎಂದು ಆರ್‌ಜೆಡಿ ನಾಯಕ ತೆಜಸ್ವಿ ಯಾದವ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.