ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ, ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರಿಗೆ ಜೀವ ಬೆದರಿಕೆ ಹಾಕಿರುವ ಪೋಸ್ಟರ್ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಉಲುಬೇರಿಯಾದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಳಿ ವಸ್ತ್ರದ ಮೇಲೆ ಹಸಿರು ಇಂಕ್ ಬಳಸಿ ಕೈಬರಹದಲ್ಲಿ ಪತ್ರ ಬರೆಯಲಾಗಿದೆ. ಉಲುಬೇರಿಯಾದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸ್ಥಳವೊಂದರಲ್ಲಿ ಪೋಸ್ಟರ್ ಪತ್ತೆಯಾಗಿದೆ. ಇಲ್ಲಿ ಇದೇ 20ರಂದು ಲೋಕಸಭಾ ಚುನಾವಣೆ ನಡೆಯಲಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಅವರನ್ನು ನಾನು ಕಾರು ಗುದ್ದಿಸಿ ಕೊಲ್ಲುತ್ತೇನೆ. ಆ ಬಳಿಕ ಎಲ್ಲರೂ ದೀಪ ಬೆಳಗಬಹುದು. ನನ್ನ ಬಳಿ ಒಂದು ಗುಪ್ತ ಪತ್ರವಿದೆ ಎಂದು ಬೆಂಗಾಳಿ ಭಾಷೆಯಲ್ಲಿ ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಪೋಸ್ಟರ್ ಅನ್ನು ಕಟ್ಟಡ ಕಾಮಗಾರಿಯ ಸ್ಥಳದಲ್ಲಿ ಗೋಡೆಗೆ ಅಂಟಿಸಲಾಗಿತ್ತು.

‘ಪೋಸ್ಟರ್‌ನಲ್ಲಿ ಉಲ್ಲೇಖಿಸಿರುವ ಗುಪ್ತ ಪತ್ರದ ಅರ್ಥವೇನು ಎಂಬುದು ತಿಳಿದಿಲ್ಲ. ಇದೊಂದು ಹುಸಿ ಬೆದರಿಕೆ ಇರಬಹುದು. ಈ ಬೆದರಿಕೆ ಪತ್ರದ ಹಿಂದೆ ಒಬ್ಬ ವ್ಯಕ್ತಿ ಅಥವಾ ಗುಂಪೇ ಇದೆಯೇ ಎಂಬುದನ್ನು ಪತ್ತೆ ಮಾಡಬೇಕಿದೆ’ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಕುರಿತ ತನಿಖೆ ಆರಂಭವಾಗಿದೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.