ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣ್ ಶೌರಿ ಅವರ ಹೊಸ ಕೃತಿ ‘ಪ್ರಿಪೇರಿಂಗ್ ಡೆತ್’ ಶೀಘ್ರ ಮಾರುಕಟ್ಟೆಗೆ

ಸಾವಿಗೆ ಸಿದ್ಧತೆ ಹೇಗೆ -ಅರುಣ್ ಶೌರಿ ಅವರ ಹೊಸ ಕೃತಿ
Last Updated 11 ಅಕ್ಟೋಬರ್ 2020, 9:56 IST
ಅಕ್ಷರ ಗಾತ್ರ

ನವದೆಹಲಿ: ಎಲ್ಲರ ಬದುಕಿನಲ್ಲಿಯೂ ಅದು ನಿಶ್ಚಿತ. ಎಂದೋ ಒಂದು ದಿನ ಅದಕ್ಕೆ ಮುಖಾಮುಖಿ ಆಗಲೇಬೇಕು. ಆದರೆ, ಅದಕ್ಕಾಗಿ ಯಾರೊಬ್ಬರು ಕನಿಷ್ಠ ಸಿದ್ಧತೆ ಮಾಡಿಕೊಂಡಿರುವುದಿಲ್ಲ. ಅದು 'ಸಾವು'.

ಶಾಂತಿಯುತವಾಗಿ ಸಾವಿಗೆ ಎದುರುಗೊಳ್ಳುವುದು ಹೇಗೆ? ಇಂಥದೊಂದು ಪ್ರಶ್ನೆಗೆ ಉತ್ತರ ಹುಡುಕುವ ಯತ್ನವಾಗಿ ಲೇಖಕ ಅರುಣ್ ಶೌರಿ ಹೊಸ ಪುಸ್ತಕ ‘ಪ್ರಿಪೇರಿಂಗ್ ಡೆತ್’ ರಚಿಸಿದ್ದಾರೆ.

ಪ್ರಮುಖ ಧರ್ಮಗ್ರಂಥಗಳು, ತತ್ವಶಾಸ್ತ್ರದ ಉಲ್ಲೇಖದೊಂದಿಗೆ ಆಧ್ಯಾತ್ಮಿಕತೆಯ ತರಬೇತಿಯು ಶಾಂತಿಯುತವಾಗಿ ಸಾವು ಎದುರಿಸಲು, ಅದನ್ನು ಸಮಚಿತ್ತದಿಂದ ಸ್ವೀಕರಿಸಲು ಜನರಿಗೆ ನೆರವಾಗುತ್ತದೆ ಎಂದು ಶೌರಿ ಅವರು ಪ್ರತಿಪಾದಿಸುತ್ತಾರೆ.

ಪ್ರಿಪೇರಿಂಗ್ ಡೆತ್ ಶೀರ್ಷಿಕೆಯ ಕೃತಿಯುಸಾಯುವ ಹೊತ್ತಿನಲ್ಲಿ ಮನಸ್ಸನ್ನು ಶಾಂತವಾಗಿಸುವ ನಿಟ್ಟಿನಲ್ಲಿ ಹಲವು ಒಳನೋಟಗಳು, ವ್ಯಾಖ್ಯಾನಗಳು, ಪ್ರಾಯೋಗಿಕ ಸಲಹೆಗಳನ್ನು ಒಳಗೊಂಡಿದೆ. ಕೃತಿಯು ಇದೇ ತಿಂಗಳಿನಲ್ಲಿ ಬಿಡುಗಡೆ ಆಗಲಿದೆ ಎಂದು ಪ್ರಕಾಶನ ಸಂಸ್ಥೆ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ತಿಳಿಸಿದೆ.

‘ಸಾವು ದೀರ್ಘಕಾಲಿಕವಾಗಿ ಪ್ರಚಲಿತ ವಿಷಯ. ಪ್ರಸ್ತುತ ಸಂದರ್ಭದಲ್ಲಿ ಕಳೆದ ಹತ್ತು ತಿಂಗಳಲ್ಲಿ ಅಸಂಖ್ಯ ಜನರು ಕೋವಿಡ್-19ನಿಂದಾಗಿ ಸತ್ತಿದ್ದಾರೆ. ಹೀಗಾಗಿ, ಸಾವು ಪ್ರಸ್ತುತ ಪ್ರಚಲಿತವಾದ ವಿಷಯ. ನಮ್ಮಲ್ಲಿ ಬಹುತೇಕ ಜನರಿಗೆ ಗೊತ್ತಿಲ್ಲದ ಅನೇಕ ಅಂಶಗಳು ಈ ಕೃತಿಯಲ್ಲಿವೆ’ ಎನ್ನುತ್ತಾರೆ ಅರುಣ್ ಶೌರಿ.

ಬುದ್ಧ, ರಾಮಕೃಷ್ಣ ಪರಮಹಂಸ, ರಮಣ ಮಹರ್ಷಿ, ಮಹಾತ್ಮಗಾಂಧಿ, ವಿನೋಬಾ ಭಾವೆ ಸೇರಿದಂತೆ ಹಲವರ ಅಂತಿಮ ದಿನಗಳ ಘಟನೆಗಳು, ಅವರ ಉಪನ್ಯಾಸಗಳನ್ನು ಕೃತಿಯಲ್ಲಿ ಉಲ್ಲೇಖಿಸಲಾಗಿದೆ.

‘ನನಗೆ ಉಪಯುಕ್ತ ಎನಿಸಿದ ಕೆಲವು ಉಪನ್ಯಾಸಗಳು, ಆಧ್ಯಾತ್ಮದ ಚಿಂತನೆಗಳನ್ನು ಉಲ್ಲೇಖಿಸಿದ್ದೇನೆ. ಕೆಲವು ತಿಂಗಳ ಹಿಂದೆ ನಾನು ತೀವ್ರ ನಿಗಾ ಘಟಕದಲ್ಲಿ ಇದ್ದಾಗ ಇವುಗಳು ನನಗೆ ಸಹಕಾರಿ ಆಗಿದ್ದವು’ ಎಂದು ಅವರು ಹೇಳಿದರು.

ಶೌರಿ ಅವರು ತಮ್ಮ ಮನೆ ಮಹಾರಾಷ್ಟ್ರದ ಲಾವಾಸ ಬಳಿ ನಡೆದಾಡುವಾಗ ಬಿದ್ದಿದ್ದರು. ಆಗ ತಲೆಗೆ ಪೆಟ್ಟಾಗಿತ್ತು. ಅವರು ಕಳೆದ ಡಿಸೆಂಬರ್ 1ರಂದು ಆಸ್ಪತ್ರೆಗೆ ದಾಖಲಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT