ಕೋಲ್ಕತ್ತ (ಪಿಟಿಐ): ರಾಜ್ಯ ಸರ್ಕಾರ ನಡೆಸುವ ವಿಶ್ವವಿದ್ಯಾಲಯಗಳಿಗೆ ಮುಖ್ಯಮಂತ್ರಿಯೇ ಕುಲಪತಿಯಾಗಬೇಕು ಎಂಬ ಮೂರು ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಪ್ಪಿಗೆ ನೀಡಲು ನಿರಾಕರಿಸಿದ್ದಾರೆ. ಈ ಮುರು ಮಸೂದೆಗಳನ್ನು ಪಶ್ಚಿಮ ಬಂಗಾಳ ಸರ್ಕಾರ ವಿಧಾನಸಭೆ ಅಂಗೀಕರಿಸಿತ್ತು.

‘ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರೇ ವಿಶ್ವವಿದ್ಯಾಲಯಗಳಿಗೆ ಕುಲಪತಿಯಾಗಿ ಮುಂದುವರಿಯಲಿದ್ದಾರೆ’ ಎಂದು ಲೋಕ ಭವನ ಸೋಮವಾರ ತಿಳಿಸಿದೆ. ವಿಶ್ವವಿದ್ಯಾಲಯಗಳ ಆಡಳಿತದ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ಮಧ್ಯೆ ತೀವ್ರ ಜಗಳ ಉಂಟಾದ ಕಾರಣ ಈ ಮಸೂದೆಗಳನ್ನು ಮಂಡಿಸಲಾಗಿತ್ತು.

ಪಶ್ಚಿಮ ಬಂಗಾಳ (ತಿದ್ದುಪಡಿ) ಮಸೂದೆ 2022, ಆಲಿಯಾ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ 2022 ಮತ್ತು ಆರೋಗ್ಯ ವಿಜ್ಞಾನಗಳ ಪಶ್ಚಿಮ ಬಂಗಾಳ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ 2022– ಈ ಮೂರು ಮಸೂದೆಗಳನ್ನು ರಾಜ್ಯಪಾಲರು ರಾಷ್ಟ್ರಪತಿ ಒಪ್ಪಿಗೆಗಾಗಿ 2024ರಲ್ಲಿ ಕಳುಹಿಸಿದ್ದರು. 2022ರಲ್ಲಿ ಜಗದೀಪ್ ಧನಕರ್ ಅವರು ಇಲ್ಲಿನ ರಾಜ್ಯಪಾಲರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.