ಲಖನೌ (ಪಿಟಿಐ): ‘ದೇಶದ ಮಹಾನ್ ಯೋಧರು ಮತ್ತು ನಾಯಕರನ್ನು ಗೌರವಿಸದ ಹಿಂದಿನ ಸರ್ಕಾರಗಳ ತಪ್ಪುಗಳನ್ನು ನಮ್ಮ ಸರ್ಕಾರ ಸರಿಪಡಿಸುತ್ತಿದೆ’ ಎಂದು ಪ್ರದಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.

ಉತ್ತರಪ್ರದೇಶದ ಬಹ್ರೇಚ್‌ನಲ್ಲಿ ಶ್ರಾವಸ್ತಿಯ ಪರಾಕ್ರಮಿ ರಾಜ ಸುಹೆಲ್ದೇವ್ ಅವರ ಪ್ರತಿಮೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿಅವರು ಮಾತನಾಡಿದರು.

‘ನಾಯಕರಾದ ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಬಿ.ಆರ್.ಅಂಬೇಡ್ಕರ್ ಅವರಿಗೂ ಸಲ್ಲಬೇಕಾದ ಗೌರವವನ್ನು ಹಿಂದಿನ ಸರ್ಕಾರಗಳು ನೀಡಿಲ್ಲ. ಆದರೆ ನಮ್ಮ ಸರ್ಕಾರ ಆ ತಪ್ಪುಗಳನ್ನೂ ಸರಿಪಡಿಸುತ್ತಿದೆ’ ಎಂದು ಹೇಳಿದರು.

ರಾಜ ಸುಹೆಲ್ದೇವ್ ಅವರ 4.20 ಮೀಟರ್ ಎತ್ತರದ ಪ್ರತಿಮೆ ನಿರ್ಮಾಣವನ್ನೂ ಒಳಗೊಂಡಿರುವ ಯೋಜನೆಯು ಕೆಫೆಟೇರಿಯಾ, ಅತಿಥಿ ಗೃಹ ನಿರ್ಮಾಣ ಮತ್ತು ಮಕ್ಕಳ ಉದ್ಯಾನ ಸೇರಿದಂತೆ ವಿವಿಧ ಪ್ರವಾಸಿ ಸೌಲಭ್ಯಗಳನ್ನು ಒಳಗೊಂಡಿದೆ.

ಇದೇ ವೇಳೆ ಪ್ರಧಾನಿ ಅವರು ಸುಹೆಲ್ದೇವ್ ಅವರ ಹೆಸರಿನ ವೈದ್ಯಕೀಯ ಕಾಲೇಜನ್ನೂ ಉದ್ಘಾಟಿಸಿದರು.

ಕೋವಿಡ್ –19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಮತ್ತು ರಾಜ್ಯವನ್ನು ಅಭಿವೃದ್ಧಿಯ ಹಾದಿಯಲ್ಲಿ ನಡೆಸಲು ಉತ್ತರ ಪ್ರದೇಶ ಸರ್ಕಾರ ಉತ್ತಮ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಶ್ಲಾಘಿಸಿದರು.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.