ನವದೆಹಲಿ: ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆ ಮುಕ್ತಾಯವಾಗುವವರೆಗೆ ಮುಂದಿನ ಮೂರು ವರ್ಷ ದೇಶಿ ಉತ್ಪನ್ನಗಳನ್ನು ಬಳಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ.

ಈ ವರ್ಷದ ಕೊನೆಯ ರೇಡಿಯೊ ಭಾಷಣ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ‘ಸ್ಥಳೀಯ ಉತ್ಪನ್ನಗಳನ್ನು ಇತರರೂ ಬಳಸುವಂತೆ ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.

ಬರಲಿರುವ ದಶಕಗಳು ಯುವಕರದ್ದು: ಮುಂದಿನ ದಶಕಗಳು ಯುವಕರಿಗೆ ಸೇರಿವೆ ಎಂದು ಮೋದಿ ಹೇಳಿದರು.ಈ ವ್ಯವಸ್ಥೆಯಲ್ಲಿ ನಂಬುಗೆ ಇರಿಸಿಕೊಂಡಿದ್ದಕ್ಕಾಗಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಹಾಗೊಂದು ವೇಳೆ ವ್ಯವಸ್ಥೆ ಸೂಕ್ತವಾಗಿ ಪ್ರತಿಕ್ರಿಯೆ ತೋರದೇ ಇದ್ದಾಗ ಅದನ್ನು ಪ್ರಶ್ನೆ ಕೂಡ ಮಾಡುವವರೇ ಈ ಯುವಜನತೆ ಎಂದರು.

ಯುವಕರು ಅರಾಜಕತೆಯನ್ನು ದ್ವೇಷಿಸುತ್ತಾರೆ. ಜಾತಿವಾದ, ಸ್ವಜನಪಕ್ಷಪಾತ ಮತ್ತು ಒಬ್ಬರ ಪರವಾದ ಒಲವನ್ನು ಇಷ್ಟಪಡುವುದಿಲ್ಲ ಎಂದು ಮೋದಿ ವಿಶ್ಲೇಷಿಸಿದರು.

ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧ ದೇಶದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವಿರೋಧ ವ್ಯಕ್ತವಾಗಿದ್ದರ ಹಿನ್ನೆಲೆಯಲ್ಲಿ ಪ್ರಧಾನಿ ಹೀಗೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.