ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.27–ಫೆ15ರ ನಡುವೆ ಕೋಟಿ ಬೆಲೆಯ‌ 8,350 ಚುನಾವಣಾ ಬಾಂಡ್ ಮುದ್ರಣ

Published 27 ಫೆಬ್ರುವರಿ 2024, 23:30 IST
Last Updated 27 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ಕಳೆದ ವರ್ಷದ ಡಿಸೆಂಬರ್ 27ರಿಂದ, ಈ ವರ್ಷದ ಫೆಬ್ರುವರಿ 15ರ ಅವಧಿಯಲ್ಲಿ ₹1 ಕೋಟಿ ಮುಖಬೆಲೆಯ 8,350 ಚುನಾವಣಾ ಬಾಂಡ್‌ಗಳನ್ನು ಮುದ್ರಿಸಿದೆ. ‘ಚುನಾವಣಾ ಬಾಂಡ್‌ಗಳು ಅಸಾಂವಿಧಾನಿಕ’ ಎಂದು ಸುಪ್ರೀಂ ಕೋರ್ಟ್‌ ಫೆ. 15ರಂದು ಆದೇಶಿಸಿತ್ತು.

ಒಟ್ಟಾರೆ ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದ ದಿನದವವರೆಗೆ ಸರ್ಕಾರ ₹ 1 ಕೋಟಿ ಮುಖಬೆಲೆಯ ಒಟ್ಟು 33,000 ಬಾಂಡ್‌ಗಳನ್ನು ಮುದ್ರಿಸಿತ್ತು ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ನೀಡಿರುವ ಉತ್ತರದಲ್ಲಿ ತಿಳಿಸಲಾಗಿದೆ.

ಆರ್‌ಟಿಐ ಕಾರ್ಯಕರ್ತ ಕಮಾಂಡರ್ ಲೋಕೇಶ್‌ ಬಾತ್ರಾ (ನಿವೃತ್ತ) ಅವರು ಈ ಕುರಿತಂತೆ ಅರ್ಜಿ ಸಲ್ಲಿಸಿದ್ದರು. ಚುನಾವಣಾ ಬಾಂಡ್‌ಗಳು ಮುದ್ರಣ ಆರಂಭವಾದ 2018ರಿಂದ ಇಲ್ಲಿವರೆಗೂ ವಿವಿಧ ಮುಖಬೆಲೆಯ ಒಟ್ಟು 6.82 ಲಕ್ಷ ಬಾಂಡ್‌ಗಳನ್ನು ಮುದ್ರಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಚುನಾವಣಾ ಬಾಂಡ್‌ಗಳ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸುಪ್ರೀಂ ಕೋರ್ಟ್ ಆದೇಶಿಸಬಹುದು ಎಂಬ ವಿಶ್ವಾಸ ಕೇಂದ್ರ ಸರ್ಕಾರಕ್ಕೆ ಇದ್ದಿರಬೇಕು. ಅದೇ ಕಾರಣದಿಂದ ಕೋಟಿ ಮುಖಬೆಲೆಯ ಬಾಂಡ್‌ಗಳನ್ನು ಮುದ್ರಿಸಲು ಮುಂದಾಗಿದೆ ಎಂದು ಬಾತ್ರಾ ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರ ಕಳೆದ ಬಾರಿ 2022ರಲ್ಲಿ, ₹ 1 ಕೋಟಿ ಮುಖಬೆಲೆಯ 10 ಸಾವಿರ ಚುನಾವಣಾ ಬಾಂಡ್‌ಗಳನ್ನು ಮುದ್ರಿಸಿದ್ದರೆ, ಡಿ.27ರಿಂದ ಫೆ. 15ರ ನಡುವಿನ ಅವಧಿಯಲ್ಲಿ 8,350 ಬಾಂಡ್‌ಗಳನ್ನು ಮುದ್ರಿಸಲಾಗಿದೆ. ಈ ಪೈಕಿ 15,631 ಬಾಂಡ್‌ಗಳು ಬಿಕರಿಯಾಗಿವೆ.

ಈ ವರ್ಷದ ಜನವರಿವರೆಗೂ ಒಟ್ಟು 30 ಹಂತದಲ್ಲಿ ಬಾಂಡ್‌ಗಳ ಮಾರಾಟ ನಡೆದಿದೆ. ಹೀಗೆ ಮಾರಾಟದ ವಾದ ಬಾಂಡ್‌ಗಳ ಒಟ್ಟು ಮೌಲ್ಯ ₹ 16,518.10 ಕೋಟಿಗಳಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT