ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಾಂಕಾ ಚೋಪ್ರಾ ಜಿಂದಾಬಾದ್ ಎಂದ ಕಾಂಗ್ರೆಸ್ ನಾಯಕ: ವಿಡಿಯೊ ವೈರಲ್

Last Updated 2 ಡಿಸೆಂಬರ್ 2019, 4:54 IST
ಅಕ್ಷರ ಗಾತ್ರ

ನವದೆಹಲಿ: ರ‍್ಯಾಲಿಯೊಂದರಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಗೊಂದಲಕ್ಕೀಡಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಹೆಸರಿನ ಬದಲಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಹೆಸರಿಡಿದು ಕರೆದು ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೀಮ್ ಮತ್ತು ಜೋಕ್‌ಗಳು ಹರಿದಾಡುತ್ತಿವೆ.

ವಿಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ಸಾವಿರಾರು ಟ್ವೀಟ್‌ಗಳು ಹರಿದಾಡುತ್ತಿದ್ದಂತೆ ಪ್ರಿಯಾಂಕಾ ಚೋಪ್ರಾ ಟ್ರೆಂಡ್ ಆಗಿದ್ದಾರೆ.

ವಿಡಿಯೊದಲ್ಲಿ, ಕಾಂಗ್ರೆಸ್ ನಾಯಕ ಸುರೇಂದ್ರ ಕುಮಾರ್ ನೆರೆದಿದ್ದ ಜನಸಮೂಹಕ್ಕೆ ಸನ್ನೆ ಮಾಡುವ ಮೂಲಕ ತಾವು ಹೇಳಿದ್ದನ್ನು ಸೋನಿಯಾ ಗಾಂಧಿ ಜಿಂದಾಬಾದ್, ಕಾಂಗ್ರೆಸ್ ಪಾರ್ಟಿ ಜಿಂದಾಬಾದ್, ರಾಹುಲ್ ಗಾಂಧಿ ಜಿಂದಾಬಾದ್, ಪ್ರಿಯಾಂಕಾ ಚೋಪ್ರಾ ಜಿಂದಾಬಾದ್ ಎಂದು ಪುನರಾವರ್ತಿಸುವಂತೆ ಒತ್ತಾಯಿಸಿದ್ದಾರೆ.

ಈ ವೇಳೆ ಅಲ್ಲೇ ನಿಂತಿದ್ದ ದೆಹಲಿ ಕಾಂಗ್ರೆಸ್ ಘಟಕದ ಸುಭಾಷ್ ಚೋಪ್ರಾ, ಸುರೇಂದ್ರ ಅವರೆಡೆಗೆ ತಿರುಗಿ ಆಶ್ಚರ್ಯ ಚಕಿತರಾಗಿದ್ದಾರೆ.

ಧನ್ಯವಾದಗಳು ದೇವರೆ!! ರಾಹುಲ್ ಜಿ ರ‍್ಯಾಲಿಯಲ್ಲಿ ಭಾಗವಹಿಸಿರಲಿಲ್ಲವೋ ಅಥವಾ ರ‍್ಯಾಲಿಗೆ ಆಹ್ವಾನಿಸಿಲ್ಲವೋ ಅಂತು ಒಳ್ಳೆಯದಾಯಿತು. ಖಂಡಿತ ಅವರು #ರಾಹುಲ್ ಬಜಾಜ್ ಜಿಂದಾಬಾದ್ ಎಂದು ಕೂಗುತ್ತಿದ್ದರು ಎಂದು ಉದ್ಯಮಿ ರಾಹುಲ್ ಬಜಾಜ್ ಅವರನ್ನು ಉಲ್ಲೇಖಿಸಿ ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದಾರೆ.

ಪ್ರಿಯಾಂಕಾ ಚೋಪ್ರಾ ಯಾವಾಗ ಕಾಂಗ್ರೆಸ್‌ಗೆ ಸೇರ್ಪಡೆಯಾದರು? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ರಾಬರ್ಟ್ ವಾದ್ರಾ ಜಾಗದಲ್ಲಿ ನಿಕ್ ಜೋನಸ್ ಜಿಂದಾಬಾದ್ ಎಂದು ಹೇಳಿ ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT