ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಮೆಟ್ರೋ ಕಂಬದಲ್ಲಿ ‘ಖಾಲಿಸ್ತಾನ’ ಪರ ಬರಹ

Published 28 ಮಾರ್ಚ್ 2024, 14:19 IST
Last Updated 28 ಮಾರ್ಚ್ 2024, 14:19 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಮೆಟ್ರೊ ನಿಲ್ದಾಣದಲ್ಲಿ ಖಾಲಿಸ್ತಾನ ಪರ ಬರಹಗಳನ್ನು ಬರೆದಿರುವುದು ಪತ್ತೆಯಾಗಿದೆ. ಪಶ್ಚಿಮ ದೆಹಲಿಯ ಪಂಜಾಬಿ ಬಾಗ್‌ ಮೆಟ್ರೊ ನಿಲ್ದಾಣದ ಕಂಬದ ಮೇಲೆ ಗುರುವಾರ ಮುಂಜಾನೆ ಖಾಲಿಸ್ತಾನ ಪರ ಬರಹಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

ಖಾಲಿಸ್ತಾನ ‍ಪರ ಬರಹದ ಕುರಿತು ಮುಂಜಾನೆ 9.30ರ ಸುಮಾರಿಗೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಬಳಿಕ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ‘ದೆಹಲಿ ಖಾಲಿಸ್ತಾನವಾಗುತ್ತದೆ’ ಎಂದು ಕಪ್ಪು ಬಣ್ಣದಲ್ಲಿ ಬರೆದಿರುವುದು ಪತ್ತೆಯಾಗಿದೆ. 

ಪ್ರಕರಣದ ಕುರಿತು ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT