ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಮಾತಾ ಕೀ ಜೈ ಎಂದರೆ ಶಿಕ್ಷೆ: ಜಿಎಂಎಎಂ ಸರ್ಕಾರಿ ಕಾಲೇಜಿನಲ್ಲಿ ಘಟನೆಯ ಆರೋಪ

Last Updated 6 ಅಕ್ಟೋಬರ್ 2018, 13:40 IST
ಅಕ್ಷರ ಗಾತ್ರ

ಬಲಿಯಾ:‘ವಂದೇ ಮಾತರಂ’ ಹಾಡುವ ಜೊತೆಗೆ ‘ಭಾರತ್‌ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಶಿಕ್ಷಿಸಲಾಗಿದೆ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಇಲ್ಲಿನಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ.

ಜಿಎಂಎಎಂ ಅನುದಾನಿತ ಸರ್ಕಾರಿ ಕಾಲೇಜಿನಲ್ಲಿ ಈ ಘಟನೆ ವರದಿಯಾಗಿದ್ದು, ಸಮಾಜ ಕಲ್ಯಾಣ ಸಂಘಟನೆಯ ಸದಸ್ಯರು ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಷಯ ಬಹಿರಂಗಗೊಂಡಿದೆ.

‘ವಂದೇ ಮಾತರಂ ಘೋಷಣೆ ಕೂಗಿದರೆ ಶಿಕ್ಷಿಸಲಾಗುತ್ತದೆ ಎಂಬ ಆರೋಪವನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಪ್ಪಿ, ಹೇಳಿಕೆ ನೀಡಿದ್ದಾರೆ. ಅದನ್ನು ವಿಡಿಯೊ ಮಾಡಲಾಗಿದೆ’ ಎಂದು ಸಂಘಟನೆ ನಿರ್ದೇಶಕ ಶಿವಕುಮಾರ್‌ ಜೈಸ್ವಾಲ್‌ ತಿಳಿಸಿದ್ದಾರೆ.

‘ಬೆಳಗ್ಗೆಯಪ್ರಾರ್ಥನೆ ತರುವಾಯ ವಿದ್ಯಾರ್ಥಿಯೊಬ್ಬ ‘‘ಭಾರತ್‌ ಮಾತಾ ಕೀ ಜೈ’’ ಎಂಬ ಘೋಷಣೆ ಕೂಗಿದ ಕಾರಣಕ್ಕೆ ಆತನನ್ನು ಒಂದು ಗಂಟೆ ಬಿಸಿಲಿನಲ್ಲಿ ನಿಲ್ಲಿಸಲಾಯಿತು’ ಎಂದು ಅರ್ಥಶಾಸ್ತ್ರ ಶಿಕ್ಷಕ ಸಂಜಯ್‌ ಪಾಂಡೆ ಹೇಳಿದ್ದಾರೆ’ ಎಂದು ಅವರು ತಿಳಿಸಿದರು.

‘ಈ ಕುರಿತುಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ದೂರು ಸಲ್ಲಿಸಲಾಗಿದ್ದು,ವಿದ್ಯಾರ್ಥಿ, ಶಿಕ್ಷಕರ ಹೇಳಿಕೆಗಳವಿಡಿಯೊ ಲಗತ್ತಿಸಿ ಕಳುಹಿಸಲಾಗಿದೆ’ ಎಂದರು.

‘ಪ್ರಕರಣ ಗಂಭೀರವಾಗಿದ್ದು, ಜಿಲ್ಲಾ ಶಿಕ್ಷಣಾಧಿಕಾರಿನರೇಂದ್ರ ದೇವ್‌ ಪಾಂಡೆ ಅವರಿಗೆ ಈ ಕುರಿತು ತನಿಖೆ ನಡೆಸುವಂತೆ ತಿಳಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಭವಾನಿ ಸಿಂಗ್‌ ಖಂಗರಾತ್‌ ತಿಳಿಸಿದರು.

ಆರೋಪವನ್ನು ನಿರಾಕರಿಸಿರುವ ಪ್ರಾಂಶುಪಾಲ ಮಜೀದ್‌ ನಸೀರ್‌, ‘ಸಂಸ್ಥೆಯ ಹೆಸರು ಹಾಳು ಮಾಡುವ ಸಲುವಾಗಿ ಈ ರೀತಿ ಪಿತೂರಿ ನಡೆಸಲಾಗಿದೆ’ ಎಂದಿದ್ದಾರೆ.

ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹೇಳಿಕೆಯುಳ್ಳ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT