ಢಾಕಾ/ನವದೆಹಲಿ: ‘ಇನ್ಕ್ವಿಲಾಬ್ ಮಂಚ್’ ಸಂಘಟನೆಯ ನಾಯಕ ಶರೀಫ್ ಉಸ್ಮಾನ್ ಹಾದಿ ಅವರ ಸಾವಿಗೆ ನ್ಯಾಯ ಒದಗಿಸಬೇಕು. ಕೊಲೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿ ಸಂಘಟನೆಯ ಕಾರ್ಯಕರ್ತರು ಢಾಕಾದ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಇನ್ಕ್ವಿಲಾಬ್ ಮಂಚ್’ ಮತ್ತು ‘ಜುಲೈ ಮಂಚ್’ನ ನಾಯಕರು, ಬೆಂಬಲಿಗರು, ವಿದ್ಯಾರ್ಥಿಗಳು ಶುಕ್ರವಾರದ ಪ್ರಾರ್ಥನೆಯ ನಂತರ, ಢಾಕಾ ವಿಶ್ವವಿದ್ಯಾಲಯದ ಕೇಂದ್ರ ಮಸೀದಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು. ಶಹಬಾಗ್ ಜಂಕ್ಷನ್ನಲ್ಲಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು.

‘ಹಾದಿ ಹತ್ಯೆಗೆ ನ್ಯಾಯ ಸಿಗುವವರೆಗೂ ಹೋರಾಟ ಹಾಗೂ ಮುತ್ತಿಗೆ ಹಾಕುವುದನ್ನು ಮುಂದುವರಿಸುತ್ತೇವೆ. ಇಂದಿನಿಂದ, ನಾವು ಈ ಶಹಬಾಗ್ ಅನ್ನು ‘ಶಹೀದ್ ಉಸ್ಮಾನ್ ಹಾದಿ ಛತ್ತರ್’ ಎಂದು ಘೋಷಿಸುತ್ತೇವೆ. ಹಾದಿ ಹತ್ಯೆಗೆ ನ್ಯಾಯ ಸಿಗುವವರೆಗೂ ಚಳವಳಿಯನ್ನು ನಿಲ್ಲಿಸುವುದಿಲ್ಲ’ ಎಂದು ‘ಇನ್ಕ್ವಿಲಾಬ್ ಮಂಚ್’ನ ಸದಸ್ಯ ಕಾರ್ಯದರ್ಶಿ ಅಬ್ದುಲ್ಲಾ ಅಲ್ ಜಾಬರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.