ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಲೆಸ್ಟೀನಿಯನ್ನರ ಸ್ವಾತಂತ್ರ್ಯ ಹೋರಾಟ: ಐಐಟಿ ಬಾಂಬೆಯಲ್ಲಿ ಪ್ರತಿಭಟನೆ

Published 11 ನವೆಂಬರ್ 2023, 14:31 IST
Last Updated 11 ನವೆಂಬರ್ 2023, 14:31 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ‘ಇಸ್ರೇಲ್ ವಿರುದ್ಧ ಪ್ಯಾಲೆಸ್ಟೀನಿಯನ್ನರ ಸ್ವಾತಂತ್ರ್ಯ ಹೋರಾಟದ ಕುರಿತಂತೆ ಐಐಟಿಯಲ್ಲಿ ಈಚೆಗೆ ನಡೆದ ಉಪನ್ಯಾಸದಲ್ಲಿ ಭಯೋತ್ಪಾದನೆಯನ್ನು ವಿಜೃಂಭಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರೊಫೆಸರ್‌ ಹಾಗೂ ಅತಿಥಿ ಭಾಷಣಕಾರನನ್ನು ಬಂಧಿಸಬೇಕು’ ಎಂದು ಆಗ್ರಹಿಸಿ ವಿವೇಕ್ ವಿಚಾರ್ ಮಂಚ್‌ ನೇತೃತ್ವದಲ್ಲಿ ಶನಿವಾರ ಐಐಟಿ ಬಾಂಬೆ ಕ್ಯಾಂಪಸ್‌ನ ಹೊರಭಾಗದಲ್ಲಿ ಪ್ರತಿಭಟನೆ ನಡೆಯಿತು.

‘ಪ್ರತಿಷ್ಠಿತ ಸಂಸ್ಥೆಯ ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದ ಪ್ರೊಫೆಸರ್ ಶರ್ಮಿಸ್ತಾ ಸಹಾ ಮತ್ತು ಅತಿಥಿ ಭಾಷಣಕಾರ ಸುಧನ್ವಾ ದೇಶಪಾಂಡೆ ನ.6ರಂದು ನಡೆದ ಉಪನ್ಯಾಸದಲ್ಲಿ ‘ಭಯೋತ್ಪಾದಕರು ಮತ್ತು ಸಶಸ್ತ್ರ ದಂಗೆಯ ಬಗ್ಗೆ ಹೆಚ್ಚು ಮಾತನಾಡಿದ್ದಾರೆ’ ಎಂದು ಪ್ರತಿಭಟನಕಾರರು ದೂರಿದರು.

‘ದೇಶಪಾಂಡೆ ತಮ್ಮ ಭಾಷಣದಲ್ಲಿ ಪ್ಯಾಲೆಸ್ಟೀನಿಯನ್‌ ಭಯೋತ್ಪಾದಕ ಜಕಾರಿಯಾ ಜುಬೈದಿಯನ್ನು ವೈಭವೀಕರಿಸಿದ್ದಾರೆ. ಇದರ ಹಿಂದಿರುವ ಉದ್ದೇಶ ಪತ್ತೆ ಹಚ್ಚಲು ಸಹಾ ಮತ್ತು ದೇಶಪಾಂಡೆ ಅವರ ಫೋನ್‌ ಕರೆ ಮತ್ತು ಇ–ಮೇಲ್‌ಗಳ ಬಗ್ಗೆ ತನಿಖೆ ನಡೆಸಬೇಕು. ಪ್ರೊಫೆಸರ್‌ನನ್ನು ಐಐಟಿಯಿಂದ ತೆಗೆದು ಹಾಕಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT