ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು ಎಲ್ಲೆ ಮೀರಿ ಯೋಚಿಸಬೇಕು: ರಾಷ್ಟ್ರಪತಿ ಮುರ್ಮು

Published : 14 ಜುಲೈ 2023, 13:19 IST
Last Updated : 14 ಜುಲೈ 2023, 13:19 IST
ಫಾಲೋ ಮಾಡಿ
Comments

ಜೈಪುರ: ದೇಶ ಮತ್ತು ಸಮಾಜದ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು ಎಲ್ಲೆ ಮೀರಿ ಯೋಚಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶುಕ್ರವಾರ ಸಲಹೆ ನೀಡಿದ್ದಾರೆ. ರಾಜಸ್ಥಾನ ವಿಧಾನಸಭೆ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಮುರ್ಮು ‘ನಾನು ಅಥವಾ ನನ್ನದು’ ಎನ್ನುವ ಬದಲಿಗೆ ‘ನಮ್ಮದು’ ಎಂಬ ಉದ್ದೇಶದಿಂದ ಕೆಲಸ ನಿರ್ವಹಿಸಬೇಕು ಎಂದು ಹೇಳಿದ್ದಾರೆ.

ರಾಜಸ್ಥಾನ ವಿಧಾನಸಭೆಯ ಎಂಟನೇ ಅಧಿವೇಶನವು ಜನವರಿ 23 ರಂದು ಪ್ರಾರಂಭವಾಗಿತ್ತು ಆದರೆ ಅಧಿವೇಶನವು ಮಾರ್ಚ್‌ 21ಕ್ಕೆ ಮುಂದೂಡಲ್ಪಟ್ಟಿತ್ತು. ಮುಂಡೂಲ್ಪಟ್ಟ ಅಧಿವೇಶನವು ಪ್ರಾರಂಭವಾಗದ ಕಾರಣ ಇಂದು (ಶುಕ್ರವಾರ) ಸ್ಪೀಕರ್‌ ಸಿ.ಪಿ ಜೋಶಿ ಅವರು ಅಧಿವೇಶನವನ್ನು ಪುನಃ ಕರೆದರು.

ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಮುರ್ಮು, ಜನರು ತಮ್ಮ ನಾಯಕರಿಂದ ಪ್ರಭಾವಿತರಾಗಿರುತ್ತಾರೆ ಮತ್ತು ಅವರಂತೆ ಇರಲು ಪ್ರಯತ್ನಿಸುತ್ತಾರೆ. ನಾಯಕರು ದೇಶ, ರಾಜ್ಯ, ಸಮಾಜ, ಮಹಿಳೆಯರು ಮತ್ತು ಯುವಕರಿಗೆ ಯಾವ ರೀತಿಯ ಸೇವೆ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿರುತ್ತಾರೆ ಎಂದು ಹೇಳಿದರು.

‘ಜನಪ್ರತಿನಿಧಿಗಳ ನಡವಳಿಕೆ ಜನಕೇಂದ್ರಿತವಾಗಿದ್ದರೆ ಮಾತ್ರ ಸಾಲದು, ಅವರ ಚಿಂತನೆಗಳು ಕೂಡ ಹಾಗೆ ಇರಬೇಕು. ’ನಾನು ಅಥವಾ ನನ್ನದು’ ಎಂದು ಒಬ್ಬರ ಬಗ್ಗೆ ಯೋಚಿಸಿದರೆ ದೇಶ ಅಥವಾ ಸಮಾಜದಲ್ಲಿ ಯಾವುದೇ ಅಭಿವೃದ್ಧಿಯಾಗುವುದಿಲ್ಲ, ನಮಗೆ ಈ ಸ್ಥಾನ ಮತ್ತು ಜವಾಬ್ದಾರಿಯನ್ನು ನೀಡಿದ ಜನರಿಗೆ ನಾವು ಏನು ಮಾಡಿದ್ದೇವೆ ಎಂದು ನಮ್ಮನ್ನು ನಾವು ಕೇಳಿಕೊಳ್ಳಬೇಕು’ ಎಂದು ರಾಷ್ಟ್ರಪತಿ ಮುರ್ಮು ತಿಳಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜುಲೈ 13 ರಿಂದ 15ರವರೆಗೆ ರಾಜಸ್ಥಾನ ಮತ್ತು ಮಧ್ಯಪ್ರದೇಶಗಳ ಮೂರು ದಿನಗಳ ಭೇಟಿಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT