ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಗುರುವಾರ ಪ್ರಧಾನಿ ಮೋದಿ ಬಳಿ ಕ್ಷಮೆ ಕೇಳಿದ್ದಾರೆ. ಅಲ್ಲದೆ, ಅವರಿಗೆ ದೀರ್ಘಾಯುಷ್ಯವನ್ನು ಕೋರಿ ಪದ್ಯವನ್ನು ಓದಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ನಿನ್ನೆ ಕೋವಿಡ್-19 ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಮೋದಿ ನಡೆಸಿದ ವಿಡಿಯೊ ಕಾನ್ಫರೆನ್ಸ್ ಸಂದರ್ಭವನ್ನು ಚನ್ನಿ ತಮ್ಮ ಸಂದೇಶವನ್ನು ರವಾನಿಸಲು ಬಳಸಿಕೊಂಡರು.

ಪಂಜಾಬ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಏನಾಯಿತೋ ಅದಕ್ಕೆಲ್ಲ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಚನ್ನಿ ಮೋದಿಗೆ ತಿಳಿಸಿದ್ದಾರೆ. ನಿಮ್ಮ ಬಗ್ಗೆ ನನಗೆ ಗೌರವವಿದೆ ಎಂದು ಅವರು ಹೇಳಿದ್ದಾರೆ.

‘ತುಮ್ ಸಲಾಮತ್ ರಹೋ ಖಯಾಮತ್ ತಕ್, ಔರ್ ಖುದಾ ಕರೇ ಖಯಾಮತ್ ನಾ ಹೊ’ಎಂದು ಹಿಂದಿಯಲ್ಲಿ ಅವರಿಗೆ ದೀರ್ಘಾಯುಷ್ಯವನ್ನು ಕೋರುವ ಪದ್ಯವನ್ನು ಪಠಿಸಿದರು.

ಜನವರಿ 5 ರಂದು ನಡೆದ ಘಟನೆಯ ನಂತರ ಚನ್ನಿ ಅವರು ಪ್ರಧಾನಿಯೊಂದಿಗೆ ನಡೆಸಿದ ಮೊದಲ ಸಂವಾದ ಇದಾಗಿದೆ.

ಕಳೆದ ವಾರ ಮೋದಿ ಅವರ ಭೇಟಿಯ ಸಮಯದಲ್ಲಿ ಅವರ ಭದ್ರತಾ ಲೋಪ ಕುರಿತಂತೆ ಪಂಜಾಬ್ ಸರ್ಕಾರ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿತ್ತು. ಕಾಂಗ್ರೆಸ್, ಪ್ರಧಾನಿಗೆ ಹಾನಿ ಮಾಡುವ ಪ್ರಯತ್ನ ನಡೆಸಿದೆ ಎಂದು ಆರೋಪಿಸಿದ್ದರು.

ಘಟನೆ ಕುರಿತಂತೆ ಚನ್ನಿ ಈ ಹಿಂದೆಯೂ ವಿಷಾದ ವ್ಯಕ್ತಪಡಿಸಿದ್ದರು. ಆದರೆ, ಮೋದಿಗೆ ಯಾವುದೇ ಬೆದರಿಕೆ ಇಲ್ಲ ಎಂದು ಹೇಳಿದ್ದರು.

ಪ್ರಧಾನ ಮಂತ್ರಿ ಮತ್ತು ಅವರ ಬೆಂಗಾವಲು ಪಡೆ ಇದ್ದ ವಾಹನಗಳು ಇದೇ 5ರಂದು ಪಂಜಾಬ್‌ನ ಫಿರೋಜ್‌ಪುರ್ ಮೇಲ್ಸೇತುವೆಯಲ್ಲಿ 15 ನಿಮಿಷ ಸ್ಥಗಿತವಾಗಿದ್ದವು. ಆಗ ರಸ್ತೆಯಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಇದು ಭದ್ರತಾ ವೈಫಲ್ಯದ ಚರ್ಚೆಗೆ ಆಸ್ಪದವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.