ಚಂಡೀಗಡ: ತಮ್ಮ ಗ್ರಾಮದಲ್ಲಿ ಏನು ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದ ವ್ಯಕ್ತಿಯೊಬ್ಬರಿಗೆ ಪಂಜಾಬ್‌ನ ಕಾಂಗ್ರೆಸ್ ಶಾಸಕ ಜೋಗಿಂದರ್ ಪಾಲ್ ಹೊಡೆದು, ಹಲ್ಲೆ ಮಾಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವರ ಜತೆ ಭದ್ರತಾ ಸಿಬ್ಬಂದಿಯೂ ವ್ಯಕ್ತಿಗೆ ಹೊಡೆಯುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ವಿಡಿಯೊದಲ್ಲೇನಿದೆ?: ಪಠಾಣ್‌ಕೋಟ್ ಜಿಲ್ಲೆಯ ಭೊವಾ ಕ್ಷೇತ್ರದ ಶಾಸಕ ಜೋಗಿಂದರ್ ಪಾಲ್ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ ಹರ್ಷ ಕುಮಾರ್ ಎಂಬುವರು ಅವರ ಬಳಿ ಬರಲು ಯತ್ನಿಸಿದ್ದು, ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಆಗ ಅವರನ್ನು ಬಳಿ ಬರಲು ಬಿಡುವಂತೆ ಭದ್ರತಾ ಸಿಬ್ಬಂದಿಗೆ ಶಾಸಕ ಸೂಚಿಸಿದ್ದಾರೆ. ಬಳಿಗೆ ಬಂದ ಹರ್ಷ ಅವರ ಕೈಗೆ ಮೈಕ್ ನೀಡಿ ಮಾತನಾಡಲು ಅವಕಾಶ ನೀಡಿದ್ದಾರೆ. ಆಗ ಮಾತನಾಡಿದ ಹರ್ಷ, ‘ಶಾಸಕನಾಗಿ ನಿಮ್ಮ ಅವಧಿಯಲ್ಲಿ ಏನು ಕೆಲಸ ಮಾಡಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ. ಕೂಡಲೇ ಕುಪಿತರಾದ ಶಾಸಕರು ವ್ಯಕ್ತಿಯ ಕೆನ್ನೆಗೆ ಹೊಡೆದಿದ್ದಾರೆ. ಬಳಿಕ ಹಲ್ಲೆ ಮಾಡಿದ್ದಾರೆ. ಭದ್ರತಾ ಸಿಬ್ಬಂದಿಯೂ ವ್ಯಕ್ತಿಯ ಮೇಲೆಹಲ್ಲೆ ಮಾಡುತ್ತಿರುವ ದೃಶ್ಯವಿಡಿಯೊದಲ್ಲಿ ಕಾಣಿಸಿದೆ.

ಘಟನೆಯನ್ನು ಪಂಜಾಬ್ ಉಪ ಮುಖ್ಯಮಂತ್ರಿ ಸುಖ್‌ಜಿಂದರ್ ಸಿಂಗ್ ರಂಧಾವ ಖಂಡಿಸಿದ್ದಾರೆ. ಶಾಸಕರು ಜನರ ಸೇವೆ ಮಾಡುವುದಕ್ಕಾಗಿಯೇ ಇರುವುದು ಹೊರತು ಈ ತರ ವರ್ತಿಸುವುದಕ್ಕಲ್ಲ ಎಂದು ಅವರು ಹೇಳಿದ್ದಾರೆ.

ಕೇವಲ ಪ್ರಶ್ನೆ ಕೇಳಿದ್ದಕ್ಕಾಗಿ ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹರ್ಷ ಕುಮಾರ್ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.