ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಾನಿಲ ಪ್ರಕರಣ: ತನಿಖೆಗೆ ಎಸ್‌ಐಟಿ ರಚನೆ

Published 1 ಮೇ 2023, 18:29 IST
Last Updated 1 ಮೇ 2023, 18:29 IST
ಅಕ್ಷರ ಗಾತ್ರ

ಲುಧಿಯಾನ: ಇಲ್ಲಿನ ಗಿಯಾಸ್ಪುರ ವಿಷಾನಿಲ ಪ್ರಕರಣದ ಸಮಗ್ರ ತನಿಖೆಗೆ ಪಂಜಾಬ್‌ ರಾಜ್ಯ ಸರ್ಕಾರ ಐವರು ಪೊಲೀಸ್‌ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. 

ಭಾನುವಾರ ವಿಷಾನಿಲ ಸೇವಿಸಿ 11 ಮಂದಿ ಮೃತಪಟ್ಟಿದ್ದರು. ಹೈಡ್ರೋಜನ್‌ ಸಲ್ಪೈಡ್‌ ಅನಿಲವೇ ಈ ಸಾವಿಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಹೈಡ್ರೋಜನ್‌ ಸಲ್ಪೈಡ್‌ ಕೊಳೆತ ಮೊಟ್ಟೆಯ ವಾಸನೆ ಬರುತ್ತದೆ. ಇದನ್ನು ಸೇವಿಸಿದವರು ತಕ್ಷಣವೇ ಪ್ರಜ್ಞಾಹೀನ ಸ್ಥಿತಿಗೆ ತಲುಪಿ ಸಾವಿನ ದವಡೆಗೆ ತಲುಪುತ್ತಾರೆ. ಈ ಅನಿಲ ದೀರ್ಘಕಾಲದ ವರೆಗೆ ಇಲ್ಲಿನ ವಾತಾವರಣದಲ್ಲಿ ಇದ್ದಿದ್ದು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‌‌‘ತನಿಖಾ ವಿಭಾಗದ ಡಿಸಿಪಿ ಹರ್ಮಿತ್‌ ಸಿಂಗ್‌ ಹುಂದಾನ್‌ ಎಸ್‌ಐಟಿ ಮುಖ್ಯಸ್ಥರಾಗಿದ್ದಾರೆ. ಒಳಚರಂಡಿ ಮಾರ್ಗಗಳಿಗೆ ಯಾವುದಾದರು ಕಾರ್ಖಾನೆಗಳು ರಾಸಾಯನಿಕ ತ್ಯಾಜ್ಯಗಳನ್ನು ಸುರಿದಿವೆಯೇ ಎಂಬ ಬಗ್ಗೆ ತನಿಖೆ ನಡೆಯಲಿದೆ. ಇದಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಕಾರ ಕೋರಿದ್ದೇವೆ. ಮಂಡಳಿ ಸ್ಪಂದಿಸದಿದ್ದರೆ ಅವರ ವಿರುದ್ಧವೂ ಕ್ರಮವಹಿಸಲಾಗುವುದು’ ಎಂದು ಲುಧಿಯಾನ ನಗರದ ಪೊಲೀಸ್‌ ಆಯುಕ್ತ ಮನ್‌ದೀಪ್‌ ಸಿಂಗ್‌ ಸಿಧು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT