ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12th Failಗೆ ಪ್ರೇರಣೆಯಾದ IPS ಅಧಿಕಾರಿ ಮನೋಜ್ ಕುಮಾರ್ ಶರ್ಮಾಗೆ ಸೇವಾ ಪದಕ

Published 25 ಜನವರಿ 2024, 14:43 IST
Last Updated 25 ಜನವರಿ 2024, 14:43 IST
ಅಕ್ಷರ ಗಾತ್ರ

ನವದೆಹಲಿ: ಐಎಎಸ್, ಐಪಿಎಸ್ ಕನಸುಹೊತ್ತ ಬಹಳಷ್ಟು ಯುವಜನತೆಯ ಗಮನ ಸೆಳೆದ 12th Fail ಚಿತ್ರದ ಸ್ಪೂರ್ತಿ ಮನೋಜ್ ಕುಮಾರ್ ಶರ್ಮಾ ಅವರಿಗೆ ಇದೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸೇವಾ ಪದಕ ದೊರೆತಿದೆ.

2005ರ ತಂಡದ ಐಪಿಎಸ್ ಅಧಿಕಾರಿಯಾಗಿರುವ ಶರ್ಮಾ, ಮಹಾರಾಷ್ಟ್ರ ಕೇಡರ್‌ಗೆ ಸೇರಿದವರು. ಸದ್ಯ ಕೇಂದ್ರ ಕೈಗಾರಿಕೆಗಳ ಭದ್ರತಾ ಪಡೆಯಲ್ಲಿ ಅಧಿಕಾರಿಯಾಗಿದ್ದಾರೆ.

ಚಂಬಲ್‌ ಕಣಿವೆಯ ಕುಗ್ರಾಮದ ಬಡ ಕುಟುಂಬದ ಹಿನ್ನೆಲೆಯ ಮನೋಜ್‌ ಕುಮಾರ್ ಶರ್ಮಾ, ಐಪಿಎಸ್ ಅಧಿಕಾರಿಯಾಗಬೇಕು ಎಂಬ ಕನಸು ಹೊತ್ತು, ಅದನ್ನು ಸಾಕಾರಗೊಳಿಸಿದ ಸಾಧನೆಯ ಪಯಣವನ್ನು ಅನುರಾಗ್ ಪಾಠಕ್ ಅವರು ಕಾದಂಬರಿಯಾಗಿಸಿದರು. ಅದೇ ಕಥೆಯನ್ನು ಆಧರಿಸಿ ನಿರ್ದೇಶಕ ವಿದು ವಿನೋದ್ ಛೋಪ್ರಾ ಅವರು'12th Fail' ಹೆಸರಿನ ಸಿನಿಮಾವನ್ನು 2023ರ ಅಕ್ಟೋಬರ್‌ನಲ್ಲಿ ತೆರೆಯ ಮೇಲೆ ತಂದರು. ಮನೋಜ್ ಪಾತ್ರದಲ್ಲಿ ನಟ ವಿಕ್ರಾಂತ್ ಮೆಸ್ಸೆ ನಟಿಸಿದ್ದಾರೆ. 

ಎಂಡಿಬಿಯಲ್ಲಿ ಅತ್ಯಧಿಕ ರೇಟಿಂಗ್ ಅನ್ನು ಈ ಚಿತ್ರ ಪಡೆದಿದೆ. ಐಪಿಎಸ್ ಅಧಿಕಾರಿ ಆಗಬೇಕು ಎಂಬ ಹಾದಿಯಲ್ಲಿ ಮನೋಜ್ ಕುಮಾರ್ ಶರ್ಮಾ ಅವರ ಜತೆಯಾದ ಬಾಳ ಸಂಗಾತಿ ಐಆರ್‌ಎಸ್ ಅಧಿಕಾರಿ ಶ್ರದ್ಧಾ ಜೋಶಿ ಅವರ ಸಾಧನೆಯ ಹಾದಿಯನ್ನು ಕಂಡ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಅದೇ ಅಧಿಕಾರಿಗೆ ಸೇವಾ ಪದಕ ಲಭಿಸಿದ್ದು, ಅಭಿನಂದನೆಗಳ ಮಹಾಪೂರವೇ ಅವರಿಗೆ ಹರಿದುಬರುತ್ತಿದೆ ಎಂದು ವರದಿಯಾಗಿದೆ.

ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಪದಕ ಪಟ್ಟಿಯಲ್ಲಿ ಶರ್ಮಾ ಅವರ ಹೆಸರು ಇದೆ. ಸದ್ಯ ಶರ್ಮಾ ಅವರು ಮುಂಬೈ ವಿಮಾನ ನಿಲ್ದಾಣದ ಭದ್ರತಾ ಹೊಣೆ ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT