ಶಿಮ್ಲಾ(ಪಿಟಿಐ): ಧರ್ಮಶಾಲಾದ ಸರ್ಕಾರಿ ಕಾಲೇಜಿನ 19 ವರ್ಷದ ವಿದ್ಯಾರ್ಥಿನಿ ಮೇಲೆ ರ್ಯಾಗಿಂಗ್ ನಡೆಸಿದ ಆರೋಪದಡಿ ಮೂವರು ವಿದ್ಯಾರ್ಥಿನಿಯರು ಹಾಗೂ ಲೈಂಗಿಕ ಕಿರುಕುಳ ನೀಡಿದ ಆರೋಪ ದಡಿಯಲ್ಲಿ ಪ್ರಾಧ್ಯಾಪಕನ ವಿರುದ್ಕ ಪ್ರಕರಣ ದಾಖಲಿಸಲಾಗಿದೆ.

ಲುಧಿಯಾನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಡಿಸೆಂಬರ್ 26ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಸಂತ್ರಸ್ತೆಯ ತಂದೆ ನೀಡಿದ ದೂರು ಆಧರಿಸಿ, ಗುರುವಾರ ಎಫ್ಐಆರ್ ದಾಖಲಿಸಲಾಗಿದೆ.

‘ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರಾದ ಹರ್ಷಿತಾ, ಆಕೃತಿ ಹಾಗೂ ಕೊಮಲಿಕಾ ಸೇರಿಕೊಂಡು 2025ರ ಸೆಪ್ಟೆಂಬರ್ 18ರಂದು ನನ್ನ ಮಗಳ ಮೇಲೆ ಹಲ್ಲೆ ನಡೆಸಿದ್ದರು. ಕಾಲೇಜಿನ ಪ್ರಾಧ್ಯಾಪಕ ಅಶೋಕ್ ಕುಮಾರ್ ಅವರು ತಮ್ಮ ಮಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು. ತೀವ್ರ ಹಲ್ಲೆ ಹಾಗೂ ಕಿರುಕುಳಕ್ಕಾಗಿ ಮಗಳು ಆಸ್ಪತ್ರೆಗೆ ದಾಖಲಾಗಿದ್ದಳು, ಚಿಕಿತ್ಸೆಗೆ ಸ್ಪಂದಿಸದೇ ನಂತರ ಮೃತಪಟ್ಟಿದ್ದಾಳೆ. ಹಲ್ಲೆಯಿಂದ ತೀವ್ರವಾದ ಮಾನಸಿಕ ಒತ್ತಡಕ್ಕೆ ಒಳಗಾಗಿ ದ್ದರಿಂದಲೇ ಮಗಳ ಆರೋಗ್ಯವೂ ತೀವ್ರವಾಗಿ ಹದಗೆಟ್ಟಿತು’ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

‘ಮಗಳು ಆಸ್ಪತ್ರೆಗೆ ದಾಖಲಾಗಿ ದ್ದರಿಂದ ಈ ಮೊದಲು ದೂರು ದಾಖಲಿಸಲು ಸಾಧ್ಯವಾಗಿರಲಿಲ್ಲ’ ಎಂದು ವಿವರಿಸಿದ್ದಾರೆ.

ಪ್ರಕರಣ ದಾಖಲಾಗಿರುವುದನ್ನು ಕಂಗ್ರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ರತನ್ ಖಚಿತಪಡಿಸಿದ್ದಾರೆ.